ಇದುವರೆಗೂ 'ನಾನು ಗೋಲಿ ಆಡಲು ಹೋಗಿರಲಿಲ್ಲ', ಶಾಸಕರ ಉಡಾಫೆ ಉತ್ತರ

26 Sep 2017 10:19 PM | Politics
563 Report

ನೆಲಮಂಗಲ: ಪಟ್ಟಣದ ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ವಾಲ್ಮಿಕಿ ಜಯಂತಿಯಲ್ಲಿ ಜೆಡಿಎಸ್ ಶಾಸಕ ಶ್ರೀನಿವಾಸ ಮೂರ್ತಿ ತಡವಾಗಿ ಆಗಮಿಸಿದ್ದರು. ಇದನ್ನು ವೇದಿಕೆಯಲ್ಲಿದ್ದ ಮುಖಂಡರೊಬ್ಬರು ಪ್ರಶ್ನಿಸಿದರು. ಅದಕ್ಕೆ ಉಡಾಫೆ ಉತ್ತರ ನೀಡಿರುವ ಶಾಸಕರು ಇದುವರೆಗೂ ನಾನು ಗೋಲಿ ಆಡಲು ಹೋಗಿರಲಿಲ್ಲ ಎಂದು ಹೇಳಿರುವುದು ಮೂಲಗಳಿಂದ ತಿಳಿದು ಬಂದಿದೆ.

ಶಾಸಕರ ಈ ವರ್ತನೆಗೆ ಬೇಸತ್ತ ವಾಲ್ಮಿಕಿ ಸಮುದಾಯದ ಮುಖಂಡರು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು. ನಂತರ ಸಮುದಾಯದ ಮುಖಂಡರ ಅನುಪಸ್ಥಿತಿಯಲ್ಲಿ ಶಾಸಕರು ಹಾಗೂ ತಹಶಿಲ್ದಾರ್ ಸಭೆಯನ್ನು ಮುಂದುವರೆಸಿ ಕಾರ್ಯಕ್ರಮದ ರೂಪರೇಷೆಗಳನ್ನು ವಿವಿಧ ಅಧಿಕಾರಿಗಳಿಗೆ ತಿಳಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿರುವ ಶಾಸಕರು, ಹಾಗೆ ಅಂದಿದ್ದು ನಿಜ, ಆದರೆ ನಾನು ಬೇರೆ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ತಡವಾಗುವುದರ ಬಗ್ಗೆ ಸಭೆಯ ಅಧ್ಯಕ್ಷರಿಗೆ ದೂರವಾಣಿ ಮೂಲಕ ತಿಳಿಸಿದ್ದೆ, ನಾನು ಯಾವುದೇ ಸಮುದಾಯವನ್ನು ಕಡೆಗಣಿಸಿಲ್ಲ, ಕೆಲವರು ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ ಎಂದು ಸಮಜಾಯಿಷಿ ನೀಡಿದರು.

Edited By

venki swamy

Reported By

Sudha Ujja

Comments