ಕಾಣೆಯಾಗಿರೋ ಸಚಿವರನ್ನು ಹುಡುಕಿಕೊಡಿ : ಶಿರಾ ಗ್ರಾಮಸ್ಥರ ಕೋರಿಕೆ
ಇದೇನಪ್ಪ ಅಂತೀರಾ.. ಓಟು ಕೇಳಲು ಬಂದಾಗ ಗ್ರಾಮಕ್ಕೆ ನೀರು, ರಸ್ತೆ ನೀಡುವುದಾಗಿ ಭರವಸೆ ನೀಡಿ ಇದುವರೆಗೂ ಭರವಸೆಗಳನ್ನು ಈಡೇರಿಸಿಲ್ಲವೆಂದು ಸಚಿವರ ಈ ಕಾರ್ಯಕ್ಕೆ ಅಸಮಾಧಾನಗೊಂಡ ಗ್ರಾಮಸ್ಥರು ಫೇಸ್ ಬುಕ್‍ನಲ್ಲಿ ಸಚಿವರನ್ನು ಹುಡುಕಿಕೊಡುವಂತೆ ಪೋಸ್ಟ್ ಮಾಡಿದ್ದಾರೆ.
ಶಿರಾ ತಾಲ್ಲೂಕಿನ ಕುಂಬಾರಹಳ್ಳಿ ಗ್ರಾಮಸ್ಥರು, ಕಾನೂನು ಸಚಿವ ಟಿ ಬಿ ಜಯಚಂದ್ರ ಅವರನ್ನು ಹುಡುಕಿಕೊಡುವಂತೆ ಸಾಮಾಜಿಕ ಜಾಲತಾಣ ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿ ಮನವಿ ಮಾಡಿದ್ದಾರೆ.ಗ್ರಾಮದ ಪಕ್ಕದಲ್ಲೇ ಇರುವ ತಮ್ಮ ಜಮೀನಿಗೆ ರಸ್ತೆ ಮಾಡಿಕೊಂಡಿದ್ದಾರೆ. ಆದರೆ ಜಮೀನಿಂದ ಎರಡು ಕಿ.ಮೀ ದೂರದ ನಮ್ಮ ಹಳ್ಳಿಗೆ ರಸ್ತೆ ಮಾಡಿಲ್ಲ ಎಂದು ಆರೋಪಿಸಿ, ಸಚಿವರ ಈ ಕಾರ್ಯಕ್ಕೆ ಅಸಮಾಧಾನಗೊಂಡ ಗ್ರಾಮಸ್ಥರು ಫೇಸ್ ಬುಕ್‍ನಲ್ಲಿ ಸಚಿವರನ್ನು ಹುಡುಕಿಕೊಡುವಂತೆ ಪೋಸ್ಟ್ ಮಾಡಿದ್ದಾರೆ.
ಎಫ್‍ಬಿಯಲ್ಲಿ ಏನಿದೆ?
ಶಿರಾ ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ಪ್ರಭಾವಿ ಕಾನೂನು ಮಂತ್ರಿಗಳಾದ ಜಯಚಂದ್ರರವರನ್ನು ಹುಡುಕಿ ಕೊಡಿ ಅಂತ ಕುಂಬಾರಹಳ್ಳಿಯ ಗ್ರಾಮಸ್ಥರ ಅಳಲು. ಇವರು ಸುಮಾರು ನಾಲ್ಕುವರೆ ವರ್ಷದ ಹಿಂದೆ ನಮ್ಮೂರಿಗೆ ಓಟು ಕೇಳಲು ಬಂದಾಗ ಮೂಲಭೂತ ಸೌಕರ್ಯಗಳಾದ ನೀರು, ರಸ್ತೆ ಇತ್ಯಾದಿ ಭರವಸೆಗಳನ್ನು ಕೊಟ್ಟು ನಾಪತ್ತೆಯಾಗಿದ್ದಾರೆ. ಜೆ ಹೊಸಹಳ್ಳಿ, ಜುಂಜಪ್ಪ ದೇವಸ್ಥಾನದ ಹತ್ತಿರ ಸಚಿವರ ಜಮೀನು ಇದ್ದು. ಅವರ ಜಮೀನಿಗೆ ಹೋಗಲು ಕಳುವರಹಳ್ಳಿಯ ಕಡೆಯಿಂದ, ಕೆಇಬಿ ಕಡೆಯಿಂದ ಮತ್ತು ಬೂತಪ್ಪನ ದೇವಸ್ಥಾನದ ಕಡೆಯಿಂದಲೂ ಡಾಂಬರ್ ರಸ್ತೆ ನಿರ್ಮಿಸಿಕೊಂಡಿದ್ದಾರೆ. ಇದೇ ಸಚಿವರ ಜಮೀನಿಗೆ ಸುಮಾರು 2 ಕಿಲೋ ಮೀಟರ್ ಹತ್ತಿರ ಇರುವ ನಮ್ಮ ಊರು ಅವರ ಕಣ್ಣಿಗೆ ಕಂಡಿಲ್ಲ. ಭೂತಪ್ಪನ ಗುಡಿಯಿಂದ, ಕುಂಬಾರಹಳ್ಳಿ ಹಾಗೂ ಕುಂಬಾರಹಳ್ಳಿಯಿಂದ ಹೊನ್ನೇನಹಳ್ಳಿಯ ವರೆಗೆ ಮಳೆ ಬಂದರೆ ಓಡಾಡುವ ಗೋಳು ಆ ಶಿವನಿಗೇ ಮುಟ್ಟಬೇಕು. ಸುಮಾರು 40 ರಿಂದ 50 ವಿದ್ಯಾರ್ಥಿಗಳು ಬೂತಪ್ಪನ ಗುಡಿ ಹೈಸ್ಕೂಲ್ ಹಾಗೂ ತಾವರೆಕೆರೆ, ಶಿರಾ ಕಾಲೇಜುಗಳಿಗೆ ನಿತ್ಯ ಓಡಾಡುತ್ತಾರೆ. ಅದ್ದರಿಂದ ನೀವು ಕೊಟ್ಟ ಆಶ್ವಾಸನೆ ಇನ್ನೂ ಈಡೇರಿಲ್ಲ.
Comments