ಸರ್ದಾರ್ ಪಟೇಲ್ ಪ್ರತಿಮೆಯ ಮೇಲೆ ಮೇಡ್ ಇನ್ ಚೀನಾ : ರಾಹುಲ್ ವಾಗ್ದಾಳಿ

ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪುತ್ಠಳಿಯ ಮೇಲೆ 'ಮೇಡ್ ಇನ್ ಚೀನಾ' ಎಂದು ಬರೆಯುವುದು ನಾಚಿಕೆಗೇಡಿನ ವಿಚಾರ ಎಂದು ರಾಹುಲ್ ಗಾಂಧಿ, ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೂರು ದಿನಗಳ ಪ್ರವಾಸದ ಎರಡನೇ ದಿನವಾದ ಮಂಗಳವಾರ (ಸೆ 26) ಸೌರಾಷ್ಟ್ರದ ಧ್ರೋಲ್ ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್, ಮೇಕ್ ಇನ್ ಇಂಡಿಯಾ ಎಂದು ಹೇಳುವ ಮೋದಿ ಸರಕಾರ, ಪಟೇಲ್ ಅವರ ಪುತ್ಠಳಿಯ ಮೇಲೆ, ಚೀನಾದ ಹೆಸರು ಬರೆಯಲು ಅವಕಾಶ ನೀಡಿರುವುದು ಈ ದೇಶಕ್ಕಾದ ಅವಮಾನ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಜಮ್ನಾನಗರದಲ್ಲಿ ವ್ಯಾಪಾರಿಗಳನ್ನು ಭೇಟಿ ಮಾಡಿ ಮಾತನಾಡಿದ ರಾಹುಲ್, ರಾಜ್ಯ ಚುನಾವಣಾ ಹೊಸ್ತಿಲಲ್ಲಿದೆ. ಇಲ್ಲಿಂದ ಆಡಳಿತ ನಡೆಸುವ ಸರಕಾರ ಬೇಕೋ ಅಥವಾ ಮೋದಿ/ಅಮಿತ್ ಶಾ ಹೇಳಿದಂತೆ ಅಧಿಕಾರ ನಡೆಸುವವರು ಬೇಕೋ ಎಂದು ಜನತೆ ತೀರ್ಮಾನಿಸಬೇಕಾಗಿದೆ ಎಂದು ರಾಹುಲ್ ಹೇಳಿದರು.
Comments