ಮೇಯರ್ ಆಡಳಿತಾವಧಿ ಮುಕ್ತಾಯಕ್ಕೆ ಇನ್ನು ಎರಡೇ ದಿನ
ಬೆಂಗಳೂರು: ಮೇಯರ್ ಆಡಳಿತ ಅವಧಿ ಕೊನೆಗೊಳ್ಳಲು ಇನ್ನು ಎರಡೇ ದಿನ ಬಾಕಿ ಇದೆ. ಆದಕಾರಣ ವರ್ಷದ ಆಡಳಿತದ ಕಾರ್ಯವೈಖರಿ ಬಗ್ಗೆ ಮೇಯರ್ ವರದಿ ಸಲ್ಲಿಸಿದ್ದಾರೆ.
ಪಾಲಿಕೆ ಆಯುಕ್ತರು ಮೇಯರ್ ಜಿ.ಪದ್ಮಾವತಿಯವರು ನಿರ್ವಹಿಸಿರುವ ಕಾರ್ಯವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ರು, ಇನ್ನು ಎರಡು ದಿನದೊಳಗೆ ಬಿಬಿಎಂಪಿ ಮೇಯರ್ ಅವಧಿ ಮುಗಿಯಲಿದ್ದು, ಇವತ್ತು ಮೇಯರ್ ಜಿ. ಪದ್ಮಾವತಿ ಅವರು ವರ್ಷದ ಸಾಧನೆ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದಾರೆ.
ಒಂದು ವರ್ಷ ಕಾಲ ಮನೆಯನ್ನು ಮರೆತು, ಒಂದು ದಿನವು ರಜೆ ಹಾಕದೇ , ಹೊರದೇಶಗಳನ್ನು ಸುತ್ತದೆ ಬೆಂಗಳೂರು ಅಭಿವೃದ್ಧಿಗಾಗಿ ದುಡಿದಿದ್ದೇನೆ, ಮಳೆ ಅನಾಹುತ ಸಂದರ್ಭದಲ್ಲಿ ರಾತ್ರಿ -ಹಗಲು ನೋಡದೆ ಸ್ಪಂದನೆ 101 ಇಂದಿರಾ ಕ್ಯಾಟೀನ್ ಆರಂಭ, ಪೌರಕಾರ್ಮಿಕರಿಗೆ ಬಿಸಿಯೂಟ- ಸಂಬಳ ಹೆಚ್ಚಳ ಸೇರಿದಂತೆ ಭ್ರಷ್ಟಾಚಾರವಿಲ್ಲದ ಬಿಬಿಎಂಪಿ ಆಡಳಿತ ನಡೆಸಿದ್ದೇನೆ ಎಂದು ಮೇಯರ್ ಜಿ.ಪದ್ಮಾವತಿ ಹೇಳಿದ್ದಾರೆ. ಅಲ್ಲದೇ ಮಹಿಳಾ ಮೇಯರ್ ಕಾರ್ಯವೈಖರಿಗೆ ಸಿಎಂ ಪತ್ನಿಯೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೆ ಅಧಿಕಾರ ನೀಡುವಂತೆ ಕೋರಿದ್ದಾರೆ.
Comments