ಬಿಜೆಪಿ ವಿರುದ್ಧ ಮುಲಾಯಂ ಸಿಂಗ್ ತೀವ್ರ ವಾಗ್ದಾಳಿ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಸರಕಾರದಡಿ ಕಳೆದ ಮೂರು ವರ್ಷಗಳಲ್ಲಿ ಕೋಮು ಹಿಂಸೆ ಹೆಚ್ಚಳವಾಗಿದೆ ಎಂದು ಉತ್ತರಪ್ರದೇಶದಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹೊಸ ಪಕ್ಷವನ್ನು ಆರಂಭಿಸುವ ಯಾವುದೇ ಆಲೋಚನೆ ತಮಗಿಲ್ಲ ಎಂದು ಮುಲಾಯಂ ಸ್ಪಷ್ಟಪಡಿಸಿದರು. ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ಹುಡುಗಿಯರ ಸುರಕ್ಷಿತರಾಗಿಲ್ಲ, ಯುಪಿ ಪ್ರದೇಶದಲ್ಲಿ ಕಾನುನೂ ಮತ್ತು ಸುವ್ಯವಸ್ಥೆ ಹದಗೆಟ್ಟು ಅರಾಜಕತೆ ತಾಂಡವಾಡುತ್ತಿದೆ ಎಂದು ಮುಲಾಯಂ ಸಿಂಗ್ ಹೇಳಿದರು.
Comments