ತೃಣಮೂಲ ಕಾಂಗ್ರೆಸ್ ನಿಂದ ಮುಕುಲ್ ರಾಯ್ ಅಮಾನತು

ನವದೆಹಲಿ:ತೃಣಮೂಲ ಕಾಂಗ್ರೆಸ್ ಟಿಎಂಸಿ ರಾಜ್ಯಸಭಾ ಸದಸ್ಯ ರೈಲ್ವೆ ಇಲಾಖೆಯ ಮಾಜಿ ಸಚಿವ ಮುಕುಲ್ ರಾಯ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಆರು ವರ್ಷ ಅವಧಿಗೆ ಅಮಾನತು ಮಾಡಲಾಗಿದೆ. ಆದ್ರೆ ಅದಕ್ಕೂ ಮೊದಲೇ ಪತ್ರಿಕಾಗೋಷ್ಠಿ ನಡೆಸಿದ್ದ ರಾಯ್ ಅವರು ಪಕ್ಷದ ಕಾರ್ಯಕಾರಿಣಿ ಮತ್ತು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
ರಾಯ್ ಅವರು ಸ್ವಲ್ಪ ಕಾಲದಿಂದ ಪಕ್ಷವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ. ಪಕ್ಷದ ಶಿಸ್ತು ಸಮಿತಿಯ ಈ ಬಗ್ಗೆ ಚರ್ಚೆ ನಡೆಸಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಶಿಫಾರಸು ಮಾಡಿತ್ತು ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಹೇಳಿದ್ದಾರೆ. ರಾಜ್ಯಸಭಾ ಸದಸ್ಯತ್ವ ಮತ್ತು ಪಕ್ಷದ ದುರ್ಗಾ ಪೂಜೆಯ ಬಳಿಕ ರಾಜೀನಾಮೆ ನೀಡುವುದಾಗಿ ರಾಯ್ ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಚಟರ್ಜಿ ಪಕ್ಷ ಬಿಡವುದಾದರೆ ಅವರು ಈಗಲೇ ಯಾಕೆ ಬಿಡಬಾರದು? ಅದಕ್ಕೆ ಏನು ಅಡ್ಡಿ ಇದೆ ಎಂದು ಪ್ರಶ್ನಿಸಿದ್ದಾರೆ.
Comments