ದೇಶದ ರಾಜಕಾರಣ ಅನುವಂಶಿಕತೆ ಎಂಬುದು ಕಾಂಗ್ರೆಸ್ ಕೊಡುಗೆ,- ಅಮಿತ್ ಶಾ
ಹೊಸ ದೆಹಲಿ: ದೇಶ ರಾಜಕಾರಣಕ್ಕೆ ಅನುವಂಶಿಕತೆಗೆ ಕೊಡುಗೆಯನ್ನು ನೀಡಿದ್ದು ಅದು ಕಾಂಗ್ರೆಸ್ ಪಕ್ಷ ಹೊರೆತು ಬೇರೆ ಯಾರು ಅಲ್ಲ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ವಂಶಾಡಳಿತೆಯ ತಿರುಗೇಟು ನೀಡಿದ್ದಾರೆ.
ಭಾರತೀಯ ಜನತಾ ಪಕ್ಷ ಉತ್ತಮ ಕಾರ್ಯ ನಿರ್ವಹಣೆಯನ್ನು ಸಾಧಿಸಿ ತೋರಿಸುವ ರಾಜಕಾರಣದಲ್ಲಿ ನಂಬಿಕೆ ಇರಿಸಿದೆ. ಸ್ವಚ್ಛತೆ , ಬಡತನ ನಿರ್ಮೂಲನೆ , ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ವಿರುದ್ಧ ಹೋರಾಟ, ಜಾತಿ ಮತ್ತು ಕೋಮು ರಾಜಕಾರಣದ ಅಂತ್ಯಕ್ಕೆ ಹೋರಾಟದೊಂದಿಗೆ ಸಮಗ್ರ ಜನಕಲ್ಯಾಣಕ್ಕೆ ಬದ್ಧತೆ ತೋರುವ ಅದಮ್ಯ ವಿಶ್ವಾಸವನ್ನು ಹೊಂದಿದೆ ಎಂದು
ಅಮಿತ್ ಶಾ ಹೇಳಿದರು.
Comments