ಗೋ ಮಾಂಸದ ಹೆಸರಲ್ಲಿ ಬಿಜೆಪಿ ರಾಜಕೀಯ : ಕಾಗೋಡು ತಿಮ್ಮಪ್ಪ

ಶಿವಮೊಗ್ಗದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು ಗೋಮಾಂಸದ ಬಗ್ಗೆ ಸಾಗರದ ಆನಂದಪುರದ ಸಮಾರಂಭದಲ್ಲಿ `ಕುರಿ, ದನದ ಮಾಂಸಗಳು ಒಂದೇ. ಗೋ ಮಾಂಸದ ಹೆಸರಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ' ಎಂದು ತಾವು ಆಡಿದ ಮಾತನ್ನು ಸಮರ್ಥಿಸಿಕೊಂಡರು.
ಎಲ್ಲಾ ಮಾಂಸಗಳು ಒಂದೇ ಎಂಬುದು ನನ್ನ ಭಾವನೆ. ಆದರೆ ಬಿಜೆಪಿಯವರು ಕೆಲವು ಕೋಮುಗಳ ವಿರುದ್ದ ಜನರನ್ನು ಎತ್ತಿಕಟ್ಟಲು ವಿಷ ಬೀಜ ಬಿತ್ತುತ್ತಿದ್ದಾರೆ. ಈ ರಾಜಕೀಯ ವಾಸನೆಯಿಂದ ಈ ಮಾತುಗಳನ್ನು ನಾನು ಹೇಳಬೇಕಾಗಿದೆ ಎಂದ ಕಾಗೋಡು ತಿಮ್ಮಪ್ಪ ಅವರು, ಇವತ್ತು ಎಷ್ಟು ಜನ ಬ್ರಾಹ್ಮಣರು ಮಾಂಸ ತಿನ್ನುತ್ತಿಲ್ಲ ಹೇಳಿ ಎಂದು ಪತ್ರಕರ್ತರತ್ತಲೇ ಪ್ರಶ್ನೆ ಎಸೆದರು. ನಾನು ಒಬ್ಬ ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಪಕ್ಷ ಸೂಚಿಸಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ. ನಮ್ಮದು ಮಾಸ್ ಬೇಸ್ಡ್ ಪಕ್ಷವಾಗಿದ್ದು. ಪಕ್ಷಕ್ಕೆ ನಿಷ್ಠೆಯಿಂದ ಇದ್ದೇನೆ. ಹಿನ್ನಲೆಯಲ್ಲಿ ನಾನು ಇನ್ನೂ ಮಂತ್ರಿಯಾಗಿ ಮುಂದುವರೆದಿದ್ದೇನೆ. ಬೆನ್ನಿಗೆ ಚೂರಿ ಹಾಕುವ ಕೆಲಸ ಗೊತ್ತಿದ್ದರೆ ನಾನು ಸಹ ಮುಖ್ಯಮಂತ್ರಿಯಾಗುತ್ತಿದ್ದೆ ಎಂದರು.
Comments