ಚಾಮುಂಡೇಶ್ವರಿಗೆ ಎರಡು ಬೆಳ್ಳಿ ಆನೆ ಅರ್ಪಿಸಿ ಹರಕೆ ತೀರಿಸಿದ ಡಿಕೆಶಿ
ಐಟಿ ದಾಳಿ ಬಳಿಕ ಇಂಧನ ಸಚಿವ ಡಿಕೆ ಶಿವಕುಮಾರ್ 2ನೇ ಬಾರಿಗೆ ಕುಟುಂಬ ಸಮೇತರಾಗಿ ಚಾಮುಂಡೇಶ್ವರಿ ದರ್ಶನ ಪಡೆದರು. ಇದೇ ಸಮಯದಲ್ಲಿ ದೇವಿಗೆ 2 ಬೆಳ್ಳಿ ಆನೆಗಳನ್ನು ಕಾಣಿಕೆಯಾಗಿ ನೀಡಿ ಹರಕೆ ತೀರಿಸಿದ್ದಾರೆ.
ಐಟಿ ದಾಳಿ ಬಳಿಕ ಇಂಧನ ಸಚಿವ ಡಿಕೆ ಶಿವಕುಮಾರ್ 2ನೇ ಬಾರಿಗೆ ಕುಟುಂಬ ಸಮೇತರಾಗಿ ಚಾಮುಂಡೇಶ್ವರಿ ದರ್ಶನ ಪಡೆದರು. ಇದೇ ಸಮಯದಲ್ಲಿ ದೇವಿಗೆ 2 ಬೆಳ್ಳಿ ಆನೆಗಳನ್ನು ಕಾಣಿಕೆಯಾಗಿ ನೀಡಿ ಹರಕೆ ತೀರಿಸಿದ್ದಾರೆ.ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್ 31 ಕೆಜಿ ತೂಕದ 2 ಬೆಳ್ಳಿ ಆನೆಗಳನ್ನು ಸಮರ್ಪಿಸಿದರು. ನಿನ್ನೆ ಡಿಕೆಶಿ ಅವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ಅಲ್ಲಿ ತುಲಾಭಾರ ಸೇವೆ ಸಲ್ಲಿಸಿದ್ದರು. ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದ ಡಿಕೆಶಿ ಸುದ್ದಿಗಾರರ ಜತೆ ಮಾತನಾಡಿ, "ಈ ಹಿಂದೆ ನೀಡಿದ್ದ ಬೆಳ್ಳಿ ಆನೆ ಸರಿ ಇರಲಿಲ್ಲ, ಹೀಗಾಗಿ ಈಗ ಹೊಸ ಬೆಳ್ಳಿ ಆನೆ ನೀಡಿದ್ದೇನೆ. ನಾನು ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ದೇವಿ ನೆರವೇರಿಸಿದ್ದಾಳೆ" ಎಂದು ಹೇಳಿದರು.
Comments