ದಕ್ಷಿಣ ಏಷ್ಯಾದಲ್ಲಿ ಭಾರತ 'ಭಯೋತ್ಪಾದನೆಯ' ತಾಯಿ- ಪಾಕ್ ರಾಯಭಾರಿ ಮಲೀಹಾ ಲಾಧಿ

ನವದೆಹಲಿ: ವಿಶ್ವಸಂಸ್ಥೆಯ್ಲಿ ಪಾಕಿಸ್ತಾನದ ಮಾನವನ್ನು ಹರಾಜು ಹಾಕಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಪಾಕ್ ಪ್ರತ್ಯುತ್ತರ ನೀಡಿದ್ದು, ದಕ್ಷಿಣಾ ಏಷ್ಯಾದಲ್ಲಿ ಭಾರತ ಭಯೋತ್ಪಾದನೆಯ ತಾಯಿ. ಜನಾಂಗೀಯ ಹಾಗೂ ಫಾಸಿಸ್ಟ್ ಸಿದ್ಧಾಂತಗಳು ನರೇಂದ್ರ ಮೋದಿ ಸರ್ಕಾರದಲ್ಲಿ ಮಿಳಿತವಾಗಿವೆ ಎಂದು ಪಾಕ್ ರಾಯಭಾರಿ ಮಲೀಹಾ ಲೋಧಿ ಹೇಳಿದ್ದಾರೆ.
ಅಂತರಾಷ್ಟ್ರೀಯ ಸಮುದಾಯಗಳು ಭಾರತ-ಪಾಕಿಸ್ತಾನ ನಡುವಿನ ಅಪಾಯವನ್ನು ತಡೆಯಲು ಇಚ್ಛಿಸುವುದಾದರೆ ಮೊದಲು ಭಾರತದ ಪ್ರಚೋದನಕಾರಿ ಹಾಗೂ ಆಕ್ರಮಣಕಾರಿ ನಡೆಯನ್ನು ತಡೆಯಬೇಕು. ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಇದನ್ನು ನಿಯಂತ್ರಿಸಬೇಕು. ಪಾಕಿಸ್ತಾನದ ವಿರುದ್ಧ ಭಯೋತ್ಪಾದಕ ಸಂಘಟನೆಗಳಿಗೆ ಭಾರತ ಸ್ಪಾನ್ನರ್ ಮಾಡುತ್ತಿದೆ. ಇದನ್ನು ನಿಲ್ಲಿಸಬೇಕು ಎಂದು ಪಾಕ್ ಹೇಳಿದೆ.
Comments