ಪ್ರಧಾನಿ ಮೋದಿ ಪತ್ರಕ್ಕೆ ರಹಾನೆ ನೀಡಿದ ಉತ್ತರ...

ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಪತ್ರದಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನದಲ್ಲಿ ಕೈ ಜೋಡಿಸುವಂತೆ ಕೋರಿದ್ದರು. ಇದಕ್ಕೆ ಪ್ರತಿಉತ್ತರ ನೀಡಿದ ಅಜಿಂಕ್ಯ ರಹಾನೆ ಟ್ವೀಟರ್ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಧನ್ಯವಾದ ಹೇಳಿದ್ದಾರೆ.
ರಹಾನೆ ಪ್ರಧಾನ ಮಂತ್ರಿ ಪತ್ರದ ಫೋಟೋವೊಂದನ್ನು ಟ್ವಿಟ್ ಮಾಡಿದ್ದಾರೆ. ಗೌರವಾನ್ವಿತ ನರೇಂದ್ರ ಮೋದಿ, ನಿಮ್ಮ ಈ ಪತ್ರದಿಂದ ನನಗೆ ಖುಷಿಯಾಗಿದೆ. ಸ್ವಚ್ಛತಾ ಹೀ ಸೇವಾ ಅಭಿಯಾನದಲ್ಲಿ ಪಾಲ್ಗೊಳ್ಳುವುದು ನನಗೆ ಗೌರವದ ವಿಷಯವೆಂದು ರಹಾನೆ ಟ್ವಿಟ್ ಮಾಡಿದ್ದಾರೆ. ದೇಶದ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ಈ ಅಭಿಯಾನ ಶುರುಮಾಡಿದೆ. ಪ್ರಧಾನ ಮಂತ್ರಿ ನೇತೃತ್ವದಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನ ನಡೆಯುತ್ತಿದೆ. ಸೆಪ್ಟೆಂಬರ್ 15ರಿಂದ ಅಭಿಯಾನ ಶುರುವಾಗಿದ್ದು ಅಕ್ಟೋಬರ್ 2 ಗಾಂಧಿ ಜಯಂತಿಯವರೆಗೆ ಅಭಿಯಾನ ನಡೆಯಲಿದೆ. ಈ ಅಭಿಯಾನದಲ್ಲಿ ಕೈಜೋಡಿಸಲು ಪ್ರಧಾನ ಮಂತ್ರಿ ಭಾರತದ ಗಣ್ಯರಿಗೆ ಪತ್ರ ಬರೆದಿದ್ದಾರೆ.
Comments