ಪುತ್ರ ಬೇಗ ಚೇತರಿಸಿಕೊಳ್ಳಲಿ ಎಂದು ಗೌಡರಿಂದ ಪರಮಾತ್ಮನ ಮೊರೆ
ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆಗಾಗಿ ಅಪೋಲೊ ಆಸ್ಪತ್ರೆಯಲ್ಲಿ ಡಾ. ಸತ್ಯಕಿ ನೇತೃತ್ವದ ವೈದ್ಯರ ತಂಡ ಸುಮಾರ 45 ನಿಮಿಷಗಳ ಕಾಲ ಯಶಶ್ವಿಯಾಗಿ ಆಪರೇಷನ್ ಮಾಡಿದೆ. ಪುತ್ರ ಬೇಗ ಚೇತರಿಸಿಕೊಳ್ಳಲಿ ಎಂದು ಎಚ್. ಡಿ. ದೇವೇಗೌಡ ಅವರು ಭಗವಂತನ ಮೊರೆ ಹೋಗಿದ್ದು, ನಗರದ ಶನಿಮಹಾತ್ಮ, ಗವಿಗಂಗಾಧರ್ ಸ್ವಾಮಿ ಹಾಗೂ ಆಂಜನೇಯಗೆ ವಿಶೇಷ ಪೂಜೆ ಸಲ್ಲಿಸಿದರು.
ಇದೇ 26 ರಂದು ಕುಮಾರಸ್ವಾಮಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದು, ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಲ್ಯಾಪ್ರೋಸ್ಕೋಪಿಕ್ ಕೀಹೋಲ್ ಪ್ರಕ್ರಿಯೆ ಮೂಲಕ ಟಿಶ್ಯೂವಾಲ್ವ್ ಬದಲಾವಣೆ ಮಾಡಲಾಯಿತು. ಹತ್ತು ವರ್ಷಗಳ ಹಿಂದೆ ಟಿಶ್ಯೂವಾಲ್ವ್ ಅಳವಡಿಸಲಾಗಿತ್ತು. ಇತ್ತೀಚೆಗೆ ದೂಳಿನ ಅಲರ್ಜಿ ಮತ್ತು ಕಫದ ಸಮಸ್ಯೆಯಿಂದ ಹೃದಯ ಕವಾಟದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಹಳೆಯ ವಾಲ್ವ್ ಕಾಲಾವಧಿ ಮುಗಿರುವುದರಿಂದ ಅದನ್ನು ಬದಲಿಸಲು ವೈದ್ಯರು ಸಲಹೆ ನೀಡಿದ್ದರು. ಇದೀಗ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಶನಿವಾರ ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ.
Comments