ಕಾಂಗ್ರೆಸ್ ಚಳುವಳಿ ಮೂಲತಃ ಎನ್‌ಆರ್ ಐಗಳ ಚಳುವಳಿ : ರಾಹುಲ್ ಗಾಂಧಿ
ಅಮೆರಿಕದಲ್ಲಿ ಭಾಷಣ ಮಾಡಿರುವ ರಾಹುಲ್ ಗಾಂಧಿ, ಕಾಂಗ್ರೆಸ್ ಚಳುವಳಿ ಮೂಲತಃ ಎನ್‌ಆರ್ ಐಗಳ ಚಳುವಳಿ, ಮಹಾತ್ಮಾ ಗಾಂಧಿ, ಅಂಬೇಡ್ಕರ್, ನೆಹರು ರವರು ಅನಿವಾಸಿ ಭಾರತೀಯರು ಎಂದು ಹೇಳಿದ್ದಾರೆ.
ಮೂಲ ಕಾಂಗ್ರೆಸ್ ನ ಚಳುವಳಿ ಎನ್‌ಆರ್ ಐ ಚಳುವಳಿಯೇ ಆಗಿತ್ತು. ಜವಾಹರ್ ಲಾಲ್ ನೆಹರು ಇಂಗ್ಲೆಂಡ್ ನಿಂದ ಭಾರತಕ್ಕೆ ವಾಪಸ್ ಬಂದರು, ಅಂಬೇಡ್ಕರ್, ಆಜಾದ್, ಪಟೇಲ್ ಇವರೆಲ್ಲರೂ ವಿದೇಶದಿಂದ ಭಾರತಕ್ಕೆ ಸ್ವಾತಂತ್ರ್ಯ ಚಳುವಳಿಗಾಗಿ ವಾಪಸ್ ಬಂದಿದ್ದರು. ಆದ್ದರಿಂದ ಕಾಂಗ್ರೆಸ್ ಚಳುವಳಿ ಮೂಲತಃ ಎನ್‌ಆರ್ ಐಗಳ ಚಳುವಳಿ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ನ್ಯೂಯಾರ್ಕ್ ನಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿಗರ ಸಭೆಯನ್ನುದ್ದೇಶಿಸಿ ಮಾತನಾಡಿರುವ ರಾಹುಲ್ ಗಾಂಧಿ, ಮೇಲೆ ಹೇಳಲಾಗಿರುವ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರೂ ವಿದೇಶದಿಂದ ವಾಪಸ್ ಬಂದು ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಚಿಂತನೆಗಳಿಂದ ಭಾರತವನ್ನು ಬದಲಾವಣೆ ಮಾಡಿದ್ದರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
Comments