ಪಾಕಿಸ್ತಾನದ ಬೆದರಿಕೆಗೆ ತಿರುಗೇಟು ನೀಡಿದ ದಿಟ್ಟ ಮಹಿಳೆ
ನಮ್ಮ ಬಳಿ ಶಸ್ತ್ರಾಸ್ತ್ರಗಳಿವೆ ಎಂದು ಬೆದರಿಕೆ ಒಡ್ಡಿದ ಪಾಕ್ ಪ್ರಧಾನಿ ಶಾಹೀದ್ ಖಕಾನ್ ಅಬ್ಬಾಸಿ ಬೆದರಿಕೆಗೆ ವಿಶ್ವಸಂಸ್ಥೆಯಲ್ಲಿ ದಿಟ್ಟ ತಿರುಗೇಟು ನೀಡಿರುವ ಭಾರತ ಪಾಕಿಸ್ತಾನವನ್ನು 'ಟೆರರಿಸ್ಥಾನ್' ಎಂದು ಕರೆದಿದೆ. 'ಟೆರರಿಸ್ಥಾನ್'' ಆಗಿದ್ದು ಉಗ್ರರ ಕಾರ್ಖಾನೆಗಳಲ್ಲಿ ಉಗ್ರರನ್ನು ಉತ್ಪಾದನೆ ಮಾಡಿ ಜಗತ್ತಿಗೆ ರಫ್ತು ಮಾಡುತ್ತಿದೆ'ಎಂದು ಕಿಡಿ ಕಾರಿದ್ದಾರೆ
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾಡತನಾಡಿದ ವಿಶ್ವಸಂಸ್ಥೆಯ ಭಾರತದ ಮೊದಲ ಕಾರ್ಯದರ್ಶಿ ಯೆನಾಮ್ ಗಂಭೀರ್ 'ಪಾಕಿಸ್ತಾನ ಭೌಗೋಳಿಕವಾಗಿ ಉಗ್ರವಾದದ ಸಮನಾರ್ಥಕವಾಗಿ ಗುರುತಿಸಿಕೊಂಡಿದೆ. ಒಸಮಾ ಬಿನ್ ಲಾಡೆನ್, ಮುಲ್ಲಾ ಓವರ್ಗೆ ರಕ್ಷಣೆ ನೀಡಿದ ದೇಶ, 26/11 ದಾಳಿಯ ಮಾಸ್ಟರ್ಮೈಂಡ್ ಹಫೀಜ್ ಸಯೀದ್ ಪಾಕ್ ನಲ್ಲಿ ಸ್ವತಂತ್ರವಾಗಿ ತಿರುಗಾಡುತ್ತಿದ್ದಾನೆ. ಜಾಗತಿಕ ಉಗ್ರರನ್ನು ಉತ್ಪಾದಿಸುವುದು ಪಾಕಿಸ್ತಾನದ ಮುಖ್ಯ ಗುರಿಯಾಗಿದ್ದು, ಉಗ್ರರಿಗೆ ಸುರಕ್ಷಿತ ತಾಣಗಳನ್ನು ನೀಡುತ್ತಿದೆ. ಉಗ್ರ ಸಂಘಟನೆಗಳ ಮುಖಂಡರು ಪಾಕ್ ಮಿಲಿಟರಿ ಮತ್ತು ರಾಜಕಾರಣಿಗಳೊಂದಿಗೆ ಉತ್ತಮ ನಂಟು ಹೊಂದಿದ್ದಾರೆ' ಎಂದು ಪಾಕ್ ಮಾನ ಹರಾಜು ಹಾಕಿದ್ದಾರೆ.
Comments