ಶಾಸಕ ಸೋಮಶೇಖರ್ ಕಾರು ಅಪಘಾತ
ಮೈಸೂರು: ಕಬಿನಿ ಜಲಾಶಯದಲ್ಲಿ ಬಾಗಿನ ಅರ್ಪಿಸಿ ಮರಳುತ್ತಿರುವಾಗ ಎಚ್.ಡಿ.ಕೋಟೆಯ ಸಿರಮಳ್ಳಿ ಗ್ರಾಮದ ಬಳಿ ಗುಂಡಿ ತಪ್ಪಿಸಲು ಹೋಗಿ ಮುಂದೆ ಸಾಗುವಾಗ ಸಚಿವ ಮತ್ತು ಶಾಸಕರ ಕಾರು ಡಿಕ್ಕಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಮೈಸೂರಿನಲ್ಲಿ ಇನ್ನಷ್ಟು ದಸರಾ ಕಾರ್ಯಕ್ರಮಗಳಿರುವ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಮರಳುತ್ತಿರುವಾಗ ಸಚಿವ ಮಹಾದೇವಪ್ಪ, ಶಾಸಕರ ಸೋಮಶೇಖರ್ ಮತ್ತು ಅಧಿಕಾರಿಯೊಬ್ಬರ ಕಾರುಗಳ ನಡುವೆ ಅಪಘಾತ ಸಂಭವಿಸಿದೆ.
ರಸ್ತೆಗಳಲ್ಲಿರುವ ಗುಂಡಿಗಳನ್ನು ಕಂಡು ದಿಗ್ಭಾಂತರಾದ ಸಚಿವ ಮಹಾದೇವಪ್ಪ, ಶೀಘ್ರದಲ್ಲಿಯೇ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಸ್ಥಳದಲ್ಲಿಯೇ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಸಚಿವ ಮಹಾದೇವಪ್ಪ ಮತ್ತು ಶಾಸಕ ಸೋಮಶೇಖರ್ ಕಾರು ಪರಸ್ಪರ ಡಿಕ್ಕಿಯಾಗಿ ಜಖಂಗೊಂಡ ಘಟನೆ ವರದಿಯಾಗಿದೆ.
Comments