ಎಸ್ಎಂಕೆ ಅಳಿಯ ಸಿದ್ದಾರ್ಥ್ ಗೆ ಐಟಿ ಶಾಕ್

ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ದಾರ್ಥ್ ಅವರ ಮಾಲೀಕತ್ವದ ಕಾಫಿ ಡೇ ಕಚೇರಿಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಇಂದು ದಾಳಿ ನಡೆಸಿ ಶಾಕ್ ನೀಡಿದ್ದಾರೆ.
ಸಿದ್ದಾರ್ಥ ಅವರ ಮಾಲೀಕತ್ವದ ಕಾಫಿ ಡೇ ದೇಶ ವಿದೇಶಗಳಲ್ಲೂ ರೆಸ್ಟೋರೆಂಟ್ ಗಳನ್ನು ನಡೆಸುತ್ತಿದೆ.ಇದರ ಜೊತೆಗೆ ಸಿದ್ಧಾರ್ಥ್ ಒಡೆತನದಲ್ಲಿರುವ ಮಾಲ್, ಕಾಫಿ ಫ್ಲಾಂಟೇಶನ್ ಸೇರಿದಂತೆ ಹಲವು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ವಿಠಲ್ ಮಲ್ಯ ರಸ್ತೆಯಲ್ಲಿರುವ ಯು.ಬಿ ಸಿಟಿಯಲ್ಲಿನ ಕೆಫೆ ಕಾಫಿ ಡೇ ಪ್ರಧಾನ ಕಚೇರಿಗೆ ಸುಮಾರು 8 ಇನೋವಾ ಕಾರುಗಳಲ್ಲಿ ಬಂದ ಅಧಿಕಾರಿಗಳು, ತನಿಖೆ ನಡೆಸಿ, ಹಲವಾರು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಚಿಕ್ಕಮಂಗಳೂರು, ಬೆಂಗಳೂರು, ಮುಂಬಯಿ, ಚೆನ್ನೈ ಸೇರಿದಂತೆ 20 ಕಡೆಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ.
Comments