ಕರ್ನಾಟಕದಲ್ಲಿ ಕಮಲ ಅರಳಿಸಲು ಮೋದಿ - ಷಾ ಮಾಸ್ಟರ್ ಪ್ಲಾನ್

ಕರ್ನಾಟಕದಲ್ಲಿ ತಾವರೆಯನ್ನು ಅರಳಿಸಲು ಮೋದಿ-ಶಾ ಮಾಡಿದ ಐಡಿಯಾ ನೋಡಿದ್ರೆ ಕರ್ನಾಟಕದಲ್ಲಿ ಕಾಂಗ್ರೆಸನ್ನು ಮುಂದೆ ದುರ್ಬಿನ್ ಹಿಡಿದು ಹುಡುಕಬೇಕಷ್ಟೆ. ಕರ್ನಾಟಕದ ಹಿಂದೂಗಳ ಪಾಲಿಗೆ ದುಃಸ್ವಪ್ನವಾಗಿರುವ ಕಾಂಗ್ರೆಸ್ ಸರ್ಕಾರ ಒಂದೆಡೆಯಾದರೆ , ಜನತಾದಳದ ಮುಖಂಡ ಎಚ್.ಡಿ. ದೇವೇಗೌಡ ಅವರು ನಾನು ಕರ್ನಾಟಕವನ್ನು ಹಿಂದೂ ರಾಜ್ಯವಾಗಲು ಬಿಡೋಲ್ಲ ಅನ್ನುತ್ತಿದ್ದಾರೆ. ಒಟ್ಟಿನಲ್ಲಿ ಹಿಂದೂಗಳನ್ನು ಎಷ್ಟು ತುಳಿಯಲು ಸಾಧ್ಯವೋ ಅಷ್ಟು ತುಳಿದು ಅವರನ್ನು ಇಬ್ಭಾಗವನ್ನಾಗಿಸಲು ಇನ್ನಿಲ್ಲದ ಸರ್ವ ಪ್ರಯತ್ನ ಮುಖ್ಯವಾಗಿ ಎಲ್ಲಾ ರಾಜಕೀಯ ಪಕ್ಷಗಳು ಮಾಡುತ್ತಿವೆ.ಈ ಬಾರಿ ಮತ್ತೊಮ್ಮೆ ಕರ್ನಾಟಕದ ಅಧಿಕಾರದ ಚುಕ್ಕಾಣಿಯನ್ನು ಪಡೆಯಲು ಕಾಂಗ್ರೆಸ್ ಶತಾಯಗತಾಯ ಪ್ರಯತ್ನಿಸುತ್ತದೆ. ಅದಕ್ಕಾಗಿ ಕಾಂಗ್ರೆಸ್ ಮಾಡಿದ್ದ ಕಿತಾಪತಿ ಏನು ಗೊತ್ತಾ? ವೀರಶೈವ-ಲಿಂಗಾಯತ ಸಮುದಾಯವನ್ನು ಮುಂದಿಟ್ಟುಕೊಂಡು ಅವರನ್ನು ಪರಸ್ಪರ ಕಚ್ಚಾಡಿಸಿ ಪ್ರತ್ಯೇಕ ಧರ್ಮವಾಗಿಸಲು ಹುನ್ನಾರ!! ಇದಕ್ಕೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ ರಣತಂತ್ರ ರೂಪಿಸಿದ್ದಾರೆ . ಏನಪ್ಪಾ ಅಂದ್ರೆ ..
ಕರ್ನಾಟಕದಲ್ಲಿ ಕ್ಷೇತ್ರವಿಂಗಡನೆ, ಜಾತಿ ಲೆಕ್ಕಾಚಾರ, ರಾಜ್ಯದ ಜನತೆಯ ದೃಷ್ಟಿಕೋನ, ಸಿದ್ದರಾಮಯ್ಯ ಸರಕಾರದ ವೈಫಲ್ಯ, ಹಿಂದೂ ವಿರೋಧಿ ನೀತಿ, ಮೋದಿ ಸರಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಜನರ ಮೇಲೆ ಬಿದ್ದಿರುವ ಪರಿಣಾಮ, ಕರ್ನಾಟಕ ರಾಜ್ಯದ ಬಿಜೆಪಿ ಮುಖಂಡರ ವರ್ಚಸ್ಸು, ಇತ್ತೀಚೆಗೆ ನಡೆದ ಹಲವಾರು ಸಮೀಕ್ಷೆ ಅದಕ್ಕಿಂತಲೂ ಮುಖ್ಯವಾಗಿ ಕಾರ್ಯಕರ್ತರ ಮನೋಭಾವ ಇತ್ಯಾದಿಗಳನ್ನು ಸಾಕಷ್ಟು ಅಧ್ಯಯನ ನಡೆಸಿದ ಚಾಣಾಕ್ಷ ಅಮಿತ್ ಷಾ ಬಿಜೆಪಿಯನ್ನು ರಾಜ್ಯದಲ್ಲಿ ಗೆಲ್ಲಿಸಲು ಪ್ಲಸ್ ಆಗುವಂಥಾ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಕ್ಷೇತ್ರಬದಲಾವಣೆ :
ಸಮೀಕ್ಷಾ ವರದಿಗಳನ್ನು ಗಮನದಲ್ಲಿಟ್ಟುಕೊಂಡು ಅಮಿತ್ ಷಾ ಹಾಗೂ ನರೇಂದ್ರ ಮೋದಿಯವರು ರಾಜ್ಯದ ಹಲವು ದಿಗ್ಗಜ ನಾಯಕರು ಕ್ಷೇತ್ರ ಬದಲಾವಣೆ ಮಾಡಿಕೊಳ್ಳಬೇಕು. ಬಿಜೆಪಿ ಪ್ರಾಬಲ್ಯ ಕಡಿಮೆ ಇರುವ ಕಡೆಗಳಲ್ಲಿ ರಾಜ್ಯದ ನಾಯಕರ ವರ್ಚಸ್ಸು, ಜಾತಿಲೆಕ್ಕಾಚಾರ ಇತ್ಯಾದಿಗಳನ್ನು ಕಂಡುಕೊಂಡು ರಾಜ್ಯ ಬಿಜೆಪಿ ಮುಖಂಡರು ತನ್ನ ಸ್ವಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು. ಎನ್ನುವುದು ಷಾ ಗೇಮ್ ಪ್ಲಾನ್ .
ಕ್ಷೇತ್ರ ವಿಂಗಡಣೆಯ ಲೆಕ್ಕಾಚಾರ :
ರಾಜ್ಯದಲ್ಲಿ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಆರ್. ಅಶೋಕ್ ಮುಂತಾದವರು ಸಾಕಷ್ಟು ವರ್ಚಸ್ಸು ಇರುವ ನಾಯಕರು. ಇವರು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಅನಾಯಾಸವಾಗಿ ಗೆಲ್ಲುತ್ತಾರೆ. ಅವರು ತನ್ನ ಸ್ವಕ್ಷೇತ್ರದಲ್ಲಿ ಸ್ಪರ್ಧಿಸಿ ಪ್ರಚಂಡ ಮತಗಳಿಂದ ಗೆಲ್ಲುವುದಕ್ಕಿಂತಲೂ ಬೇರೆ ಪಕ್ಷ ಕಡಿಮೆ ಅಂತರದಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇಲ್ಲಿ ಮತಗಳ ಸಂಖ್ಯೆಗಿಂತಲೂ ಗೆಲ್ಲಬೇಕಾದ ಕ್ಷೇತ್ರಗಳು ಮುಖ್ಯ. ಜಾಸ್ತಿ ಕ್ಷೇತ್ರಗಳಲ್ಲಿ ಗೆದ್ದರಷ್ಟೇ ಬಹುಮತಗೊಂಡು ಸರಕಾರ ರಚಿಸಲು ಸಾಧ್ಯ. ಇದೇ ಅಮಿತ್-ಮೋದಿ ಮಾಸ್ಟರ್ ಪ್ಲಾನ್ ಅದಕ್ಕಾಗಿಯೇ ಮುಖಂಡರಿಗೆ ಕ್ಷೇತ್ರ ಬದಲಾವಣೆ ಮಾಡಲು ಸೂಚಿಸಿರುವುದು.
ಜಾತಿ ಲೆಕ್ಕಾಚಾರ:
ಯಾವ ಕ್ಷೇತ್ರದಲ್ಲಿ ಯಾವ ಜಾತಿ ಪ್ರಬಲವಾಗಿದೆ ಎಂದು ಅಮಿತ್ ಷಾ ಸಾಕಷ್ಟು ಅಧ್ಯಯನ ನಡೆಸಿದ್ದು, ಜಾತಿವಾರು ಪಟ್ಟಿಗಳನ್ನೂ ತಯಾರಿಸಲಾಗಿದೆ. ಬೇರೆ ಬೇರೆ ಕ್ಷೇತ್ರಗಳನ್ನು ತೋರಿಸಿ ಆಕ್ಷೇತ್ರದಲ್ಲಿ ಚುನಾವಣೆ ಗೆಲ್ಲುವಂತೆ ಸೂಚಿಸಲಾಗಿದೆ.
ಬಹುಸಂಖ್ಯಾತ ವೀರಶೈವ ಲಿಂಗಾಯತ ಮತದಾರರಿರುವ ಉತ್ತರ ಕರ್ನಾಟಕದಿಂದ ಯಡಿಯೂರಪ್ಪ ಅವರನ್ನು ಸ್ಪರ್ಧಿಸುವಂತೆ ವರಿಷ್ಠರು ಈಗಾಗಲೇ ಸೂಚನೆ ನೀಡಿದ್ದಾರೆ. ಇದಕ್ಕೆ ಯಡಿಯೂರಪ್ಪ ಕೂಡಾ ಒಪ್ಪಿಕೊಂಡಿದ್ದಾರೆ.
ಮುಂದಿನ ಬದಲಾವಣೆಗಳನ್ನು ಹೊರತುಪಡಿಸಿ ಬಿಜೆಪಿ ಮುಖಂಡರು ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕಾಗಿದೆ. ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ಗದಗ ಜಿಲ್ಲೆಯಿಂದ ಸ್ಪರ್ಧಿಸಬೇಕಾಗಿದೆ. ಬೆಂಗಳೂರಿನ ಪ್ರಭಾವಿ ಮುಖಂಡರಾಗಿರುವ ಅರವಿಂದ ಲಿಂಬಾವಳಿ ಅವರು ಬಾಗಲಕೋಟೆ ಕ್ಷೇತ್ರದಲ್ಲಿ ಸ್ಪರ್ಧಿಸಬೇಕಾಗಿದೆ. ಪ್ರಭಾವಿ ಮುಖಂಡ ಕೆ.ಎಸ್. ಈಶ್ವರಪ್ಪ ಅವರು ಹಾಲಿ ಶಿವಮೊಗ್ಗ ಕ್ಷೇತ್ರದಿಂದ ಕೊಪ್ಪಳ ಕ್ಷೇತ್ರದಲ್ಲಿ ಸ್ಪರ್ಧಿಸಬೇಕಿದೆ. ನಾರಾಯಣ ಸ್ವಾಮಿ ವೈ.ಎ ಅವರು ಹೆಬ್ಬಾಳವನ್ನ ಬಿಟ್ಟು ಶ್ರೀನಿವಾಸಪುರ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ. ಹೀಗೆ ಮುಂತಾದವರಿಗೆ ಒಂದು ಕ್ಷೇತ್ರವನ್ನು ಒಪ್ಪಿಕೊಂಡು ಅಲ್ಲಿ ಸಾಕಷ್ಟು ಶ್ರಮವಹಿಸಿ ಕ್ಷೇತ್ರಾವಾರು ಗೆಲ್ಲಲು ಪ್ಲಾನ್ ಮಾಡಲಾಗಿದೆ.ಕರ್ನಾಟಕದಲ್ಲಿ ಕನಿಷ್ಠ 100 ಸ್ಥಾನಗಳನ್ನು ಗೆದ್ದು, ಕರಾವಳಿ ಭಾಗದಲ್ಲಿ ಸಿಗುವ ಸ್ಪಷ್ಟ ಸ್ಥಾನಗಳ ಲೆಕ್ಕಾಚಾರವನ್ನಿಟ್ಟುಕೊಂಡು ಕರ್ನಾಟಕದಲ್ಲಿ ತಾವರೆ ಅರಳಿಸುವುದು ಅಮಿತ್ ಷಾ ಹೊಸ ಲೆಕ್ಕಾಚಾರಗಳಲ್ಲಿ ಒಂದಾಗಿದೆ.
ಸಿದ್ದರಾಮಯ್ಯ ಪಾಲಿಗೆ ಪ್ರತಿಷ್ಠೆಯ ಕಣವಾಗಿರುವುದರಿಂದ ಅವರ ಭವಿಷ್ಯವೂ ಇದರಲ್ಲಿ ಅಡಕವಾಗಿದೆ. ಸಮೀಕ್ಷೆಯ ಪ್ರಕಾರ ಸಿದ್ದರಾಮಯ್ಯ ಈ ಚುನಾವಣೆಯಲ್ಲಿ ಸೋತರೆ ಅವರ ರಾಜಕೀಯ ಭವಿಷ್ಯವೇ ಅಂತ್ಯವಾಗಲಿದೆ. ವೈಯಕ್ತಿಕ ದ್ವೇಷ ಸಾಧಿಸುತ್ತಾ ರಾಜಕಾರಣ ಮಾಡುವ ಸಿದ್ದರಾಮಯ್ಯನ ರಾಜಕೀಯ ಭವಿಷ್ಯವನ್ನು ಹೇಗಾದರೂ ಮಾಡಿ ಅಂತ್ಯಗೊಳಿಸುವಂತೆ ಮಾಡುವುದು ಅಮಿತ್ ಷಾ ಅವರ ನಿಲುವಾಗಿದೆ.
Comments