ರಾಹುಲ್ ಗಾಂಧಿಯನ್ನು ಎಂಎಸ್ ಧೋನಿಗೂ ಹೋಲಿಸಿದ ರಮ್ಯಾ
ನಟಿ, ಮಾಜಿ ಸಂಸದೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ರಮ್ಯಾ ತಮ್ಮ ಫೇಸ್ ಬುಕ್ ನಲ್ಲಿ ರಾಹುಲ್ ಗಾಂಧಿಯನ್ನು ಎಂಎಸ್ ಧೋನಿಗೂ ಹೋಲಿಸಿ ಪೋಸ್ಟ್ ಮಾಡಿ ಸುದ್ಧಿಯಾಗಿದ್ದರೆ.
ರಮ್ಯಾ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೂ ಇರುವ ಸಾಮ್ಯತೆ ಏನು? ಇವರಿಬ್ಬರನ್ನೂ ದೂಷಿಸುವವರು ತುಂಬಾ ಇದ್ದರು. ಆದರೆ ಅವರಿಬ್ಬರೂ ಮರಳಿ ಒಂದು ಭದ್ರವಾಗಿ ನೆಲೆಯೂರಿದ್ದಾರೆ ಎಂದು ಫೇಸ್ ಬುಕ್ ನಲ್ಲಿ ಫೋಟೋವನ್ನು ಅಪ್ ಲೋಡ್ ಮಾಡಿದ್ದಾರೆ. ಈ ಫೋಟೋ ಇದೀಗ ವೈರಲ್ ಆಗಿದ್ದು ನೆಟಿಜನ್ ಗಳು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಇದು ವಾಟ್ಸ್ ಆಯಪ್ ನಲ್ಲಿ ಬಂದ ಫಾರ್ವರ್ಡ್ ಮೆಸೇಜ್ ಎಂಬ ಒಕ್ಕಣೆಯೊಂದಿಗೆ ರಮ್ಯಾ ಈ ಫೋಸ್ಟ್ ಹಾಕಿದ್ದಾರೆ.
ಎಂಎಸ್ ಧೋನಿಗೂ ರಾಹುಲ್ ಗಾಂಧಿಗೂ ಹೋಲಿಕೆ ಮಾಡಬೇಡಿ ಎಂದು ಹಲವಾರು ಪೋಸ್ಟ್ ಗೆ ಕಮೆಂಟ್ ಮಾಡಿದ್ದಾರೆ. ಇದೇ ಅಲ್ಲದೆ ಕೆಲವರು ತಮಾಷೆಯ ಉತ್ತರಗಳನ್ನು ನೀಡಿ ಟ್ರೋಲ್ ಮಾಡಿದ್ದಾರೆ.
Comments