ಯಡಿಯೂರಪ್ಪ ಎಲ್ಲಿ ನಿಂತುಕೊಂಡ್ರೆ ನಮಗೇನು, ಸಿಎಂ ಸಿದ್ದರಾಮಯ್ಯ ಹೀಗೆ ಎಂದಿದ್ದೇಕೆ?

ಶಿಕಾರಿಪುರ: ಬಿ.ಎಸ್ ಯಡಿಯೂರಪ್ಪ ಎಲ್ಲಿ ನಿಂತುಕೊಂಡ್ರೆ ನಮಗೇನು, ಬಿಎಸ್ ವೈ ಉತ್ತರಕರ್ನಾಟಕ ಸ್ಪರ್ಧೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಶಿಕಾರಿಪುರ: ಬಿ.ಎಸ್ ಯಡಿಯೂರಪ್ಪ ಎಲ್ಲಿ ನಿಂತುಕೊಂಡ್ರೆ ನಮಗೇನು, ಬಿಎಸ್ ವೈ ಉತ್ತರಕರ್ನಾಟಕ ಸ್ಪರ್ಧೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಯಡಿಯೂರಪ್ಪ ಎಲ್ಲಿ ನಿಂತುಕೊಂಡ್ರೆ ನಮಗೇನು ? ಎಂದು ಕಲಬುರಗಿಯಲ್ಲಿ ಖಮರುಲ್ ಇಸ್ಲಾಂ ಅಂತ್ಯಸಂಸ್ಕಾರಕ್ಕೆ ಆಗಮಿಸಿದ್ದ ಅವರು ಈ ಹೇಳಿಕೆ ನೀಡಿದರು.
ಯಡಿಯೂರಪ್ಪ ಅವರಿಗೆ ವಿಧಾನಸಭಾ ಕ್ಷೇತ್ರವಿಲ್ಲ, ಶಿಕಾರಿಪುರ ಕ್ಷೇತ್ರದಿಂದ ತಮ್ಮ ಮಗನಿಗೆ ಕೊಡುವ ಉದ್ಧೇಶದಿಂದ ಬೇರೆ ಕ್ಷೇತ್ರ ಹುಡುಕುತ್ತಿದ್ದಾರೆ. ಅವರು ಉತ್ತರಕರ್ನಾಟಕದಿಂದ ಸ್ಪರ್ಧೆ ಮಾಡಿದರೆ ಬಿಜೆಪಿಗೆ ಲಾಭವಿಲ್ಲ ಎಂದರು. ಇನ್ನು ಕೆ.ಎಸ್ ಈಶ್ವರಪ್ಪ ಅವರು ಸಿಎಂ ವಿರುದ್ಧ ಹೇಳಿಕೆಯೊಂದನ್ನು ನೀಡಿದ್ದರು. ವೀರಶೈವ ಲಿಂಗಾಯತ ವಿಚಾರದಲ್ಲಿ ಬೆಂಕಿ ಹಚ್ಚಿದ್ದೆ ಸಿಎಂ ಎಂಬ ಹೇಳಿಕೆಗೆ ಗರಂ ಆದ ಸಿಎಂ ಈಶ್ವರಪ್ಪನವರಿಗೆ ತಲೆಯಲ್ಲಿ ಮೆದುಳಿಲ್ಲ, ಮನಸ್ಸಿಗೆ ಬಂದತೆ ಮಾತನಾಡುತ್ತಾರೆ ಎಂದು ಸಿಎಂ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಬಿಜೆಪಿ ನಾಯಕರ ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂದು ನಿನ್ನೆ ಆರ್ ಅಶೋಕ್ ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯೆ ನೀಡುತ್ತಾ, ಫೋನ್ ಕದ್ದಾಲಿಕೆ ಮಾಡ್ತಿರೋರೇ ಬಿಜೆಪಿಯವರು ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ.
Comments