ನನ್ನ ಕರ್ಮ ಭೂಮಿ ರಾಮನಗರ, ನನ್ನ ಜನರು ಇಲ್ಲಿಂದ ಬಿಟ್ಟು ಕೊಡುವುದಿಲ್ಲ : ಕುಮಾರಸ್ವಾಮಿ

ಉತ್ತರ ಕರ್ನಾಟಕ ಜನರು ನೀವು ಇಲ್ಲಿಯೇ ಸ್ಪರ್ಧಿಸುವುದರಿಂದ ನಿಮ್ಮ ಪಕ್ಷಕ್ಕೆ ಬಲಸಿಗುವುದು ಎಂದು ಹೇಳಿದ್ಧಾರೆ. ಆದರೆ ನನಗೆ ನನ್ನ ಕರ್ಮ ಭೂಮಿ ರಾಮನಗರ ಆಗಿರುವುದರಿಂದ ನನ್ನ ಜನರು ಇಲ್ಲಿಂದ ಬಿಟ್ಟು ಕೊಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಇಂದು ರಾಮನಗರದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಯವರು ಮುಂದಿನ ವಿಧಾನಸಭೆ ಚುನಾವಣೆ ಉದ್ದೇಶದಿಂದ ತಮ್ಮನ್ನು ಉತ್ತರ ಕರ್ನಾಟಕ ಜನರು ಇಲ್ಲಿಯೇ ಸ್ಪರ್ಧಿಸುವುವಂತೆ ಹೇಳಿದರು ಆದರೆ ನಾನು ರಾಮನಗರ ಕ್ಷೇತ್ರದಿಂದ ಸ್ಫರ್ದಿಸಲು ಇಚ್ಛಿಸುತ್ತೇನೆ ಎಂದು ಹೇಳಿದರು. ಯಡಿಯೂರಪ್ಪ ನವರು ಉತ್ತರ ಕರ್ನಾಟಕದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಹಾಗೆಯೇ ಸಿದ್ದರಾಮಯ್ಯನವರು ಚಾಮುಂಡಿ ಕ್ಷೇತ್ರದಲ್ಲಿ ತಮ್ಮ ಮಗನಿಗೆ ಸ್ಥಾನ ನೀಡಿ ಅವರು ಉತ್ತರ ಕರ್ನಾಟಕದಲ್ಲಿ ಸ್ಪರ್ಧೆ ಮಾಡಲಿದ್ದಾರೆ.
Comments