ಬಿಎಸ್ವೈ ಕುಟುಂಬವನ್ನು ಮಣಿಸಲು ಸಿಎಂ ಸಿದ್ದರಾಮಯ್ಯ ಮಾಡಿರುವ ಮಾಸ್ಟರ್ ಪ್ಲಾನ್ ಏನು?

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬವನ್ನು ಮಣಿಸಲು ಸಿಎಂ ಸಿದ್ದರಾಮಯ್ಯ ಅವರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಸಿಎಂ ಈಗಾಗಲೇ ಯಡಿಯೂರಪ್ಪ ವಿರುದ್ಧ 3 ಸುತ್ತಿನ ಚಕ್ರವ್ಯೂಹ ರಚಿಸಿದ್ದಾರೆ.
1999 ರಲ್ಲಿ ಬಿಎಸ್‍ವೈ ರನ್ನು ಶಿಕಾರಿಪುರದಲ್ಲಿ ಸೋಲಿಸಿದ್ದ ಮಹಾಲಿಂಗಪ್ಪ ಅವರನ್ನು ಸಿದ್ದರಾಮಯ್ಯ ಕಾಂಗ್ರೆಸ್‍ನತ್ತ ಸೆಳೆದಿದ್ದಾರೆ. ಇತ್ತ ಬಿಎಸ್‍ವೈ ಆಪ್ತ ಮಾಜಿ ಪರಿಷತ್ ಸದಸ್ಯ ಶಾಂತವೀರಪ್ಪ ಕೂಡ ಬಿಜೆಪಿಯಿಂದ ದೂರವಾಗಿದ್ದಾರೆ. ಇನ್ನೊಂದೆಡೆ ಜೆಡಿಎಸ್ ಅಭ್ಯರ್ಥಿ ಆಗಿದ್ದ ಬಳಿಗಾರ್ ಸಹ ಕಾಂಗ್ರೆಸ್ ನತ್ತ ತಮ್ಮ ಒಲವನ್ನು ತೋರಿಸಿದ್ದಾರೆ.
ಬಳಿಗಾರ್ ಹಿಂದುಳಿದ ವರ್ಗಗಳ ನಾಯಕರಾಗಿದ್ದು, ನಿವೃತ್ತ ಕೆಎಎಸ್ ಅಧಿಕಾರಿಯಾಗಿದ್ದಾರೆ. ಹೀಗೆ ಶಿಕಾರಿಪುರದ ಕ್ಷೇತ್ರದ ಪ್ರಭಾವಿ ನಾಯಕರನ್ನು ಸೆಳೆಯುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಈ ಎಲ್ಲ ಆಯಾಮಗಳಿಂದಲೂ ಸಿದ್ದರಾಮಯ್ಯನವರು ಮಾಸ್ಟರ್ ಪ್ಲಾನ್ ಮಾಡಿದ್ದರಿಂದ ಬಿಎಸ್‍ವೈ ಉತ್ತರ ಕರ್ನಾಟಕದತ್ತ ಮುಖ ಮಾಡಿದ್ದಾರೆ ಎಂಬ ಅನುಮಾನ ಮೂಡಿದೆ.
Comments