ನಾನು ದಲಿತನೆ, ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ಕಿಡಿ
ಚಿಕ್ಕಬಳ್ಳಾಪುರ: ದಲಿತರ ಮನೆಗೆ ಹೋದಾಗ ಉಪಹಾರ ಸೇವಿಸುತ್ತಾರೆ ಎಂದರೆ ಅದು ಇಲ್ಲ. ಹೊಟೇಲ್ ನಿಂದ ತಿಂಡಿ ತರಿಸಿ ತಿಂದೂ ಕೈ ತೊಳೆದು ಬರುತ್ತಾರೆ ಎಂದು ಬಿ.ಎಸ್ ಯಡಿಯೂರಪ್ಪ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ದಲಿತರ ಮನೆಗೆ ಹೋದಾಗ ಅಲ್ಲಿಯೇ ಉಪಹಾರ ಸೇವಿಸುತ್ತಾರೆ ಎಂದರೆ ಅದು ಇಲ್ಲ. ಹೊಟೇಲ್ ನಿಂದ ತಿಂಡಿ ತರಿಸಿ ತಿಂದು ಕೈತೊಳೆದು ಬರುತ್ತಾರೆ. ನಿಮಗೇನಾದರೂ ದಲಿತರ ಬಗ್ಗೆ ಕಾಳಜಿಯಿದ್ದರೆ, ನಿಮ್ಮ ಹೆಣ್ಣು ಮಕ್ಕಳನ್ನು ದಲಿತರಿಗೆ ಕೊಡಿ. ದಲಿತರ ಹೆಣ್ಣು ಮಕ್ಕಳನ್ನು ನಿಮ್ಮ ಮನೆಗೆ ತಂದು ವಿವಾಹ ಮಾಡಿ ಎಂದು ಬಿಜೆಪಿ ನಾಯಕರಿಗೆ ಸಿಎಂ ಸಲಹೆ ನೀಡಿದರು.
ನಾನು ಕೂಡ ದಲಿತನೆ, ಹಿಂದುಳಿದವರೆಲ್ಲಾ ದಲಿತರೆ, ಶೋಷಿತರೆಲ್ಲ ದಲಿತರೆ, ಪರಿಶಿಷ್ಟರ ಅಭಿವೃದ್ಧಿಗೆ ಪ್ರತ್ಯೇಕ ಕಾನೂನು ಮಾಡಿ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯವನ್ನು ಒದಗಿಸುತ್ತಿರುವುದು ನಮ್ಮ ಸರ್ಕಾರ. ಹಿಂದೆ ಯಾವ ಸರ್ಕಾರ ಕೂಡ ಈ ರೀತಿ ಮಾಡಿರಲಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಸ್ ಸಿ, ಎಸ್ ಟಿ ಅಭಿವೃದ್ಧಿಗಾಗಿ ನೀಡಲಾದ ಅನುದಾನ 21 ಸಾವಿರ ಕೋಟಿ. ನಮ್ಮ ಸರ್ಕಾರದ 5 ವರ್ಷದ ಅವಧಿಯಲ್ಲಿ ಖರ್ಚು ಮಾಡಲಾದ ಹಣ 86 ಸಾವಿರ ಕೋಟಿ ರೂ, ಅಲ್ಲಿಗಿಂತ 4 ಪಟ್ಟು ಹೆಚ್ಚು ಎಂದು ಹೇಳಿದರು.
Comments