ಮುಂದಿನ ನವರಾತ್ರಿ ವರೆಗೂ ಇರುತ್ತೇನೆ, ಇಲ್ಲವೋ ಗೊತ್ತಿಲ್ಲ? ಇದೇ ಕೊನೆ- ಜನಾರ್ದನ ಪೂಜಾರಿ

ಮಂಗಳೂರು: ಇತ್ತೀಚೆಗೆ ರಾಜಕೀಯ ವಲಯದಲ್ಲಿ ಶಾಸಕರ, ಸಚಿವರುಗಳ ನಿಧನದ ವಾರ್ತೆ ರಾಜಕೀಯ ಕ್ಷೇತ್ರದವರಿಗೆ ಹಾಗೂ ಸಾರ್ವಜನಿಕರಿಗೆ ಶಾಕಿಂಗ್ ಮೂಡಿಸುತ್ತಿವೆ.
ಮಂಗಳೂರು: ಇತ್ತೀಚೆಗೆ ರಾಜಕೀಯ ವಲಯದಲ್ಲಿ ಶಾಸಕರ, ಸಚಿವರುಗಳ ನಿಧನದ ವಾರ್ತೆ ರಾಜಕೀಯ ಕ್ಷೇತ್ರದವರಿಗೆ ಹಾಗೂ
ಸಾರ್ವಜನಿಕರಿಗೆ ಶಾಕಿಂಗ್ ಮೂಡಿಸುತ್ತಿವೆ. ಒಂದು ಕಡೆ ಸಮರ್ಥ ರಾಜಕೀಯ ನಾಯಕರ ನಿಧನ ರಾಜಕೀಯ ಕ್ಷೇತ್ರಕ್ಕೆ ನಷ್ಟವನ್ನುಂಟು ಮಾಡುತ್ತಿವೆ. ಮತ್ತೊಂದೆಡೆ ಅವರಂಥ ಮತ್ತೊಬ್ಬ ಸಮರ್ಥ ನಾಯಕರು ಇದ್ದಾರೆಯೇ? ಎಂದು ಹುಡುಕುವ ಪರಿಸ್ಥಿತಿ ಇದೆ.
ಈ ಮಧ್ಯೆ ಮಾಜಿ ಸಚಿವ ಜನಾರ್ದನ ಪೂಜಾರಿ ಎಲ್ಲರು ಶಾಕಿಂಗ್ ಆಗುವಂತಹ ಹೇಳಿಕೆ ನೀಡಿದ್ದಾರೆ. ದಸರಾ ಉತ್ಸವಕ್ಕೆ ಸಂಬಂಧಿತ ಮಾಡಲಾಗಿರುವ ಪತ್ರಿಕಾಗೋಷ್ಠಿಯಲ್ಲಿ ಜನಾರ್ದನ ಪೂಜಾರಿ ಅವರು ಮಾತನಾಡುತ್ತಾ, 'ಇದೇ ನನ್ನ ಕೊನೆಯ ಪತ್ರಿಕಾಗೋಷ್ಠಿಯಾಗಿರಬಹುದು, ಬಹುಶಃ ನವರಾತ್ರಿವರೆಗೂ ಇರುತ್ತೇನೆ ,ಇಲ್ಲವೋ ಎಂಬುದು ನನಗೆ ತಿಳಿದಿಲ್ಲ' ಎಂದು ಹೇಳಿದ್ದಾರೆ. ಮಂಗಳೂರಿನಲ್ಲಿ ನಡೆಯಲಾಗುವ ಕುದ್ರೋಳಿ ಗೋಕರ್ಣನಾಥೇಶ್ವರ್ ದೇವಸ್ಥಾನದಲ್ಲಿ ಸೆಪ್ಟೆಂಬರ್ 21 ರಿಂದ 30ರವರೆಗೆ ದಸರಾ ನವರಾತ್ರಿ ಉತ್ಸವ ನಡೆಯಲಿದೆ. ಈ ಬಗ್ಗೆ ಮಾತನಾಡುತ್ತಿದ್ದ ವೇಳೆ ಮುಂಚಿನ ಹಾಗೇ ಪೂಜಾರಿಯಿಲ್ಲ, ನಾನು ಮಾತನಾಡುವಾಗ ನೀವು ಅದನ್ನು ತಿಳಿಯಬಹುದು. ಮಾತನಾಡುವಾಗ ನನ್ನಿಂದ ಸ್ವಲ್ಪ ತಪ್ಪಾದರೆ ಕ್ಷಮಿಸಿ ಎಂದರು. ಅನಾ
ತಮ್ಮಗೆ ಅನಾರೋಗ್ಯದ ಸಮಸ್ಯೆ ಇದ್ದರೂ ನಿನ್ನೆ ರಾತ್ರಿಯವರೆಗೂ ನಿಂತು ಎಲ್ಲಾ ತಯಾರಿಗಳು ಸರಿಯಾಗಿವೆಯೇ ಎಂಬುದನ್ನು ಗಮನಿಸಿಯೇ ತೆರಳಿದ್ದೇನೆ, ಆದ್ದರಿಂದ ನನಗೆ ಅನಾರೋಗ್ಯದ ಸಮಸ್ಯೆ ಇದೆ, ಎಷ್ಟು ದಿವಸ ಬದುಕುತ್ತೇನೆಂದು ನನಗೇ ತಿಳಿದಿಲ್ಲ. ಇದೇ ನನ್ನ ಕಡೆಯ ಪತ್ರಿಕಾಗೋಷ್ಠಿ ಆಗುವ ಸಾಧ್ಯತೆ ಇದೆ ಎಂದರು.
Comments