'ಕೈ' ಹಾಗೂ 'ಕಮಲ' ಪಕ್ಷದಲ್ಲಿ ಚಟುವಟಿಕೆ ಬಿರುಸು

ಬೆಂಗಳೂರು: ಕೇಂದ್ರ ಸರ್ಕಾರ ವೈಫಲ್ಯ ಹಾಗೂ ಸ್ಥಳೀಯ ಬಿಜೆಪಿಯ ಪ್ರತಿ ಹೇಳಿಕೆಗೂ ಜಾಲತಾಣಗಳಲ್ಲಿ ತಿರುಗೇಟು ನೀಡಬೇಕು ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗಕ್ಕೆ ಸೂಚಿಸಿದ್ದಾರೆ.
ಬೆಂಗಳೂರು: ಕೇಂದ್ರ ಸರ್ಕಾರ ವೈಫಲ್ಯ ಹಾಗೂ ಸ್ಥಳೀಯ ಬಿಜೆಪಿಯ ಪ್ರತಿ ಹೇಳಿಕೆಗೂ ಜಾಲತಾಣಗಳಲ್ಲಿ ತಿರುಗೇಟು ನೀಡಬೇಕು
ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗಕ್ಕೆ ಸೂಚಿಸಿದ್ದಾರೆ.
ಚುನಾವಣಾ ಕಾವು ಹೆಚ್ಚುತ್ತಿದ್ದಂತೆ ಸಾಮಾಜಿಕ ಜಾಲತಾಣ ವಿಭಾಗದ ಪ್ರತಿನಿಧಿಗಳ ಜತೆಗೆ ವೇಣುಗೋಪಾಲ ಶನಿವಾರ ಸುದೀರ್ಘ
ಚರ್ಚೆ ನಡೆಸಿದ್ದರೆ. ಪ್ರತಿನಿಧಿಗಳ ಕಾರ್ಯವೈಖರಿಗೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು, ಆಯಾ ದಿನದಂದು ಚಾಲ್ತಿಯಲ್ಲಿರುವ
ವಿಷಯಗಳ ಬಗೆಗೂ ಟ್ವೀಟ್, ಫೇಸ್ ಬುಕ್ ಸ್ಟೇಟಸ್ ಅಥವಾ ಇನ್ನಿತರ ಅಂಶಗಳನ್ನು ಹಂಚಿಕೊಳ್ಳಲಾಗದಿದ್ದರೆ ಜವಾಬ್ದಾರಿ
ಏಕೆ ಪಡೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ನಾಯಕರು ಪ್ರತಿದಿನ ನಮ್ಮ ಪಕ್ಷದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರುತ್ತಿದ್ದಾರೆ. ಸಣ್ಣಪುಟ್ಟವಿಷಯಗಳನ್ನು ರಾಷ್ಟ್ರಮಟ್ಟದಲ್ಲಿ ಹ್ಯಾಶ್ ಟ್ಯಾಗ್ ಮಾಡಿ ಬಿಂಬಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ನಲ್ಲಿಇಂಥ ಕೆಲಸಗಳು
ಆಗುತ್ತಿಲ್ಲ. ಈ ವಿಭಾಗಕ್ಕೆ ಸಂಬಂಧಪಡದ ವ್ಯಕ್ತಿ ವೈಯಕ್ತಿಕವಾಗಿ ಪಕ್ಷದ ಪರ ಕೆಲಸ ಮಾಡುತ್ತಿದ್ದರು ಜವಾಬ್ದಾರಿ ಹೊತ್ತ
ಪ್ರತಿನಿಧಿಗಳು ಸುಮ್ಮನಿದ್ದಾರೆ. ಇಂಥ ಅಶಿಸ್ತನ್ನು ಸಹಿಸುವುದಿಲ್ಲ. ಪ್ರತಿದಿನವು ಬಿಜೆಪಿ ನಾಯಕರ ಎಲ್ಲಾ ಟೀಕೆಗಳಿಗೆ ಸಮರ್ಪಕಉತ್ತರ ನೀಡಲೇಬೇಕು ಎಂದು ತಿಳಿಸಿದ್ದಾರೆ.
Comments