ಯಡಿಯೂರಪ್ಪಗೆ ಸೋಲಿನ ಭಯ ಶುರು: ತಿಮ್ಮಾಪುರ್ ಲೇವಡಿ

17 Sep 2017 12:23 PM | Politics
426 Report

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಸೋಲಿನ ಭಯ ಶುರುವಾಗಿದೆ ಎಂದು ಅಬಕಾರಿ ಖಾತೆ ಸಚಿವ ಆರ್.ಬಿ.ತಿಮ್ಮಾಪುರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಯಡಿಯೂರಪ್ಪಗೆ ಸೋಲಿನ ಭಯ ಶುರುವಾಗಿದ್ದರಿಂದ ಉತ್ರ ಕರ್ನಾಟಕದಲ್ಲಿ ಸ್ಪರ್ಧಿಸಲು ಚಿಂತನೆ ನಡೆಸಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಬಿಎಸ್ ವೈ ಶಿವಮೊಗ್ಗದಲ್ಲಿಯೇ ಸ್ಪರ್ಧಿಸಲಿ ಅಥವಾ ಉತ್ತರ ಕರ್ನಾಟಕದಲ್ಲಿಯೇ ಸ್ಪರ್ಧಿಸಲಿ ಸೋಲು ಮಾತು ಖಚಿತ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಟಾಂಗ್ ನೀಡಿದ್ದಾರೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯ ಪಾರದರ್ಶಕವಾಗಿ, ಪ್ರಾಮಾಣಿಕತೆಯಿಂದ ಅಡಳಿತ ನಡೆಸುತ್ತಿದ್ದು, ಮುಂದಿನ ಬಾರಿಯೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಸಚಿವ ತಿಮ್ಮಾಪುರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 
Edited By

venki swamy

Reported By

Sudha Ujja

Comments