ಪ್ರೈ ಮಿನಿಸ್ಟರ್ ಮೋದಿಗೆ ಬರ್ತಡೇ ಸಂಭ್ರಮ, ಭ್ರಷ್ಟಾಚಾರದ ಆರೋಪ ಇಲ್ಲದ ಮೊದಲ ರಾಜಕಾರಿಣಿ

ನವದೆಹಲಿ: ಪ್ರಧಾನಿ ಮೋದಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ,. ಅವರು 67ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ವಿಶೇಷವೆಂದರೆ ಪ್ರೈ ಮಿನಿಸ್ಟರ್ ಮೋದಿ ಯಾವುದೇ ಭ್ರಷ್ಟಾಚಾರ ಆರೋಪವಿಲ್ಲದ ಮೊದಲ ರಾಜಕಾರಿಣಿಯಾಗಿದ್ದಾರೆ.
ನವದೆಹಲಿ: ಪ್ರಧಾನಿ ಮೋದಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ,. ಅವರು 67ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ವಿಶೇಷವೆಂದರೆ ಪ್ರೈ ಮಿನಿಸ್ಟರ್ ಮೋದಿ ಯಾವುದೇ ಭ್ರಷ್ಟಾಚಾರ ಆರೋಪವಿಲ್ಲದ ಮೊದಲ ರಾಜಕಾರಿಣಿಯಾಗಿದ್ದಾರೆ. ಜತೆಗೆ ಗುಜುರಾತ್ ನಲ್ಲಿ ನರ್ಮದಾ ನದಿಗೆ ಕಟ್ಟಲಾಗಿರುವ ಬೃಹತ್ ಸರ್ದಾರ್ ಸರೋವರ್ ಡ್ಯಾಂ ಅನ್ನು ಪ್ರಧಾನಿ ಮೋದಿ ದೇಶಕ್ಕೆ ಅರ್ಪಿಸಲಿದ್ದಾರೆ.
ಸರ್ದಾರ್ ಸರೋವರ್ ಡ್ಯಾಂ ಲೋಕಾರ್ಪಣೆ ನಂತರ ನರ್ಮದಾ ನದಿಯ ಸಾಧು ಬೆಟ್ ದ್ವೀಪಕ್ಕೆ ತೆರಳಲಿದ್ದಾರೆ. ಈ ಸಾಧು ಬೆಟ್ ದ್ವೀಪದಲ್ಲಿ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ 182 ಎತ್ತರದ ಪ್ರತಿಮೆಯನ್ನು ನಿರ್ಮಿಸಲಾಗುತ್ತಿದ್ದು, ಮೋದಿ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಇದಾದ ಬಳಿಕ ದಭೋಯಿಯಲ್ಲಿ ನಡೆಯುವ ನರ್ಮದಾ ಮಹೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಳ್ಳಲಿದ್ದು, ಆ ಬಳಿಕ ರಾಷ್ಟ್ರೀಯ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಮ್ಯೂಸಿಯಂಗೆ ಪ್ರಧಾನಿ ಮೋದಿ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
Comments