ಬಿಜೆಪಿ ಸಂಸದ ಮಹಂತ ಚಂದ್ರನಾಥ್ ವಿಧಿವಶ

ಅಲ್ವಾರ್: ರಾಜಸ್ಥಾನದ ಬಿಜೆಪಿ ಸಂಸದ ಮಹಂತ್ ಚಂದ್ರನಾಥ್ (61) ವಿಧಿವಶರಾಗಿದ್ದಾರೆ. ದೆಹಲಿಯ ಅಪಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಎಎನ್ ಐ ವರದಿಯಂತೆ ಇಂದು ಹರಿಯಾಣದ ರೋಹ್ಟಕ್ ನಲ್ಲಿ ಅಂತಿಮ ವಿಧಿ ವಿಧಾನಗಳು ನಡೆಯಲಿವೆ.
ಅಲ್ವಾರ್: ರಾಜಸ್ಥಾನದ ಬಿಜೆಪಿ ಸಂಸದ ಮಹಂತ್ ಚಂದ್ರನಾಥ್ (61) ವಿಧಿವಶರಾಗಿದ್ದಾರೆ. ದೆಹಲಿಯ ಅಪಲೋ ಆಸ್ಪತ್ರೆಯಲ್ಲಿ ಕೊನೆ ಯುಸಿರೆಳೆದಿದ್ದಾರೆ. ಎಎನ್ ಐ ವರದಿಯಂತೆ ಇಂದು ಹರಿಯಾಣದ ರೋಹ್ಟಕ್ ನಲ್ಲಿ ಅಂತಿಮ ವಿಧಿ ವಿಧಾನಗಳು ನಡೆಯಲಿವೆ.
ಅವರು ನಾಥ್ ಪರಂಪರೆಯ ಸನ್ಯಾಸಿಯಾಗಿದ್ದರು. ಮಸ್ತ ನಾಥ್ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು. 2014 ರಲ್ಲಿ ಉಪಚುನಾವಣೆಯಲ್ಲಿ ಬೆಹರೂರ್ ಕ್ಷೇತ್ರದಲ್ಲಿ ಜಯಗಳಿಸಿದ್ದ ಅವರು ಸಾರ್ವತ್ರಿಕ ಚುನಾವಣೆಯಲ್ಲಿ ಅಲ್ವಾರ್ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿದು ಕಾಂಗ್ರೆಸ್ ಅಭ್ಯರ್ಥಿ ಜಿತೇಂದ್ರ ಸಿಂಗ್ ಅವರನ್ನು ಮಣಿಸಿದ್ದರು. 2017 ಫೆಬ್ರವರಿ ತಿಂಗಳಿನಲ್ಲಿ ಹರಿಯಾಣ ಕೋರ್ಟ್ ಭೂಹಗರಣವೊಂದಕ್ಕೆ ಸಂಬಂಧಿಸಿದ ಕ್ರಿಮಿನಲ್ ಪಿತೂರಿ ಸಾಬೀತಾದ ಹಿನ್ನಲೆಯಲ್ಲಿ ಚಂದ್ರನಾಥ್ 1 ವರ್ಷದ ಹಿಂದೆ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
Comments