ಬಿಬಿಎಂಪಿ ಮೇಯರ್ ಚುನಾವಣೆ: ಸಂಪತ್, ಗೋವಿಂದ್ ಮಧ್ಯೆ ಪೈಪೋಟಿ

ಬೆಂಗಳೂರು: ಮೇಯರ್ ಗಾದಿಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಮೇಯರ್ ಹುದ್ದೆಗೆ ಆಕಾಂಕ್ಷಿಗಳು ಸೃಷ್ಟಿಯಾಗುತ್ತಿದ್ದಾರೆ.
ಬೆಂಗಳೂರು: ಮೇಯರ್ ಗಾದಿಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಮೇಯರ್ ಹುದ್ದೆಗೆ ಆಕಾಂಕ್ಷಿಗಳು ಸೃಷ್ಟಿಯಾಗುತ್ತಿದ್ದಾರೆ.
ಸೆ.28ಕ್ಕೆ ಉಪ ಮೇಯರ್ ಚುನಾವಣೆ ನಡೆಯಲಿದ್ದು, ಈ ಬಾರಿ ಮೇಯರ್ ಹುದ್ದೆ ಪರಿಶಿಷ್ಟ ಜಾತಿಗೆ , ಉಪಮೇಯರ್ ಹುದ್ದೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಕಾಂಗ್ರೆಸ್ ನಿಂದ ಎಸ್ಸಿ ವರ್ಗಕ್ಕೆ ಸೇರಿದ ದೇವರ ಜೀವನಹಳ್ಳಿ ವಾರ್ಡ್ ಸದಸ್ಯ ಆರ್. ಸಂಪತ್ ರಾಜ್ ಮತ್ತು ಸುಭಾಷ್ ನಗರ ವಾರ್ಡನ್ ಗೋವಿಂದ್ ರಾಜ್ ನಡುವೆ ಮೇಯರ್ ಹುದ್ದೆಗಾಗಿ ಪೈಪೋಟಿ ನಡೆದಿದೆ. ಜೆಡಿಎಸ್ ತನಗೆ ಮೇಯರ್ ಹುದ್ದೆ ಬೇಕೆಂದು ಹಿಡಿದಿರುವ
ಪಟ್ಟು ಸಡಿಲಿಸಿದರೆ ಈ ಇಬ್ಬರಲ್ಲಿ ಒಬ್ಬರು ಮೇಯರ್ ಸ್ಥಾನ ಅಲಂಕರಿಸುವುದು ಖಚಿತ. ಎಚ್.ಡಿ ದೇವೇ ಗೌಡ ಅವರನ್ನು ಭೇಟಿ ಮಾಡಿ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ನಡೆಸಿದ ಸಭೆಯಲ್ಲಿ ಜೆಡಿಎಸ್ ಈ ಬಾರಿ ಮೇಯರ್ ಗಾದಿ ನಮಗೆ ಬಿಟ್ಟುಗೊಡಿ ಎಂದು ಪಟ್ಟು ಹಿಡಿದಿದೆ.
Comments