ಹಿಂದುತ್ವ ಜನರು ತೊಡುವ ಬಟ್ಟೆ, ಆಹಾರ ಕ್ರಮದ ಮೇಲೆ ಅವಲಂಬಿತವಾಗಿಲ್ಲ- ಮೋಹನ್ ಭಾಗವತ್

ನವದೆಹಲಿ: ಹಿಂದುತ್ವ ಎಂದರೆ ಜನರು ತೊಡುವ ಬಟ್ಟೆ ಹಾಗೂ ಆಹಾರ ಕ್ರಮದ ಮೇಲೆ ಅವಲಂಬಿತವಾಗಿಲ್ಲ ಎಂದು ಆರ್ ಎಸ್ ಎಸ್ ಸಂಘಟನೆ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ನವದೆಹಲಿ: ಹಿಂದುತ್ವ ಎಂದರೆ ಜನರು ತೊಡುವ ಬಟ್ಟೆ ಹಾಗೂ ಆಹಾರ ಕ್ರಮದ ಮೇಲೆ ಅವಲಂಬಿತವಾಗಿಲ್ಲ ಎಂದು ಆರ್ ಎಸ್ ಎಸ್ ಸಂಘಟನೆ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಹಿಂದುತ್ವವು ಜನರು ಹೇಗಿರುತ್ತಾರೋ ಹಾಗೆಯೇ ಅವರನ್ನು ಸ್ವೀಕರಿಸುತ್ತದೆ. ಯಾವುದಕ್ಕೂ ತಾರತಮ್ಯ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ
ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಹಾದೇವ್ ಅವರ ಇಂಡಿಯಾ ಫೌಂಡೇಶನ್ ಕಾರ್ಯಕ್ರಮದಲ್ಲಿ ನಿರಂತರವಾಗಿ ಬದಲಾವಣೆಗೊಳಗಾಗುತ್ತಿದ್ದ ಹಿಂದೂವಾದದ ರೂಪ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಅಸಹಿಷ್ಣುತೆ ಹಾಗೂ ಇನ್ನಿತರ ವಿಚಾರವಾಗಿ ವ್ಯಕ್ತವಾಗುತ್ತಿರುವ ಕೆಲವು ಅಣಕುಗಳು, ವಾದ -ಪ್ರತಿವಾದಗಳು ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
Comments