ತಿರುಕನ ಕನಸು ಕಾಣುತ್ತಿರುವ ರಾಹುಲ್ : ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವ್ಯಂಗ್ಯ

ನಿನ್ನೆ ಅಮೆರಿಕದ ಬರ್ಕ್ ಲೇ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಪ್ರಧಾನಿ ಅಭ್ಯರ್ಥಿ ಹೇಳಿಕೆಗೆ ಇಂದು ಬಾಗಲಕೋಟೆಯಲ್ಲಿ ವ್ಯಂಗ್ಯವಾಡಿರುವ ಬಿಎಸ್ ಯಡಿಯೂರಪ್ಪ . ಬಿಎಸ್ ಯಡಿಯೂರಪ್ಪನವರು ಕಾಂಗ್ರೆಸ್ ಪಕ್ಷದ ಬಗ್ಗೆ ವಾಗ್ದಾಳಿ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಬಂಧುಗಳು ಮಾಡಿರುವ ಭ್ರಷ್ಟಾಚಾರದ ಕುರಿತಾಗಿನ ನಾಲ್ಕೈದು ದಿನಗಳಲ್ಲಿ ಚಾರ್ಜ್ ಶೀಟ್ ಹಾಕುತ್ತಾರೆ.
ಬಿಎಸ್ ಯಡಿಯೂರಪ್ಪ ಅವರು, ರಾಹುಲ್ ಗಾಂಧಿ ಇನ್ನೂ ರಾಜಕೀಯದಲ್ಲಿ ಪ್ರಬುದ್ಧರಾಗಿಲ್ಲ. ಚಿಕ್ಕಮಕ್ಕಳ ಮನಸ್ಥಿತಿ ಇರುವುದರಿಂದ ರಾಹುಲ್ ಏನೇನೋ ಹೇಳುತ್ತಿದ್ದಾರೆ.ನಾನು ಪ್ರಧಾನಿ ಹುದ್ದೆಗೆ ಸಿದ್ಧನಿದ್ದೇನೆ, ಅವಕಾಶ ಬಂದರೆ ಒಪ್ಪಿಕೊಳ್ಳುತ್ತೇನೆ. ಆದರೆ ಕಾಂಗ್ರೆಸ್ ನಲ್ಲಿ ಸಂಘಟನಾ ವ್ಯವಸ್ಥೆ ಇದ್ದು, ಆರಿಸಿ ಬರಬೇಕಾಗುತ್ತದೆ ಎಂದು ರಾಹುಲ್ ಗಾಂಧಿ ಕ್ಯಾಲಿಫೋರ್ನಿಯಾದ ಬರ್ಕ್ ಲೀ ಯಲ್ಲಿನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಭಾರತಕ್ಕೆ 70 ವರ್ಷವಾದ ನೆನಪಿನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಚಿಕ್ಕಮಕ್ಕಳ ಮನಸ್ಥಿತಿ ಇರುವ ರಾಹುಲ್ ಗಾಂಧಿ ಪ್ರಧಾನಿ ಆಗುವ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಯಡಿಯೂರಪ್ಪ ವ್ಯಂಗ್ಯವಾಡಿದರು. ಅಲ್ಲದೆ ಸಚಿವ ಎಂ.ಬಿ ಪಾಟೀಲ್ ರನ್ನು ತರಾಟೆಗೆ ತೆಗೆದುಕೊಂಡ ಬಿ.ಎಸ್ ಯಡಿಯೂರಪ್ಪ ಅವರು, ಎಂ.ಬಿ.ಪಾಟೀಲರದ್ದು ವಿನಾಶ ಕಾಲೇ ವಿಪರೀತ ಬುದ್ಧಿ. ಈ ವಿಚಾರದಲ್ಲಿ ಸಿದ್ದಗಂಗಾ ಶ್ರೀಗಳ ಹೆಸರು ಎಳೆತರಬಾರದಿತ್ತು. ಅವರ ಬಗ್ಗೆ ಮಾತನಾಡಿದರೆ ಎಲ್ಲರೂ ಖಂಡಿಸುತ್ತಾರೆ. ಹೀಗಾಗಿ ಮೌನವಾಗಿದ್ದರೆ ಅವರಿಗೂ ಗೌರವ ಎಂದರು.
Comments