ಗೊಡ್ಡು ಬೆದರಿಕೆಗೆ ಹೆದರಲ್ಲ, ಬೆರಳು ಮಾಡಿ ತೋರಿಸಿದವರಿಗೆ ತಿರುಗೇಟು ನೀಡಿದ್ರಾ ಈಶ್ವರಪ್ಪ ?

ಬೆಂಗಳೂರು: ಗೌರಿ ಲಂಕೇಶ್ ಆಗಲಿ, ಕರಬುರಗಿ ಆಗಲಿ ಯಾವುದೇ ಹತ್ಯೆಗೂ ಸಂಘ ಪರಿವಾರಕ್ಕೂ ಸಂಬಂಧವೇ ಇಲ್ಲ, ಸಂಘ ಪರಿವಾರದತ್ತ ಬೆರಳು ಮಾಡಿದವರಿಗೆ ಕೆ.ಎಸ್ ಈಶ್ವರಪ್ಪ ಈಗ ಖಡಕ್ ಆಗಿಯೇ ತಿರುಗೇಟು ನೀಡಿದ್ದಾರೆ.
ಬೆಂಗಳೂರು: ಗೌರಿ ಲಂಕೇಶ್ ಆಗಲಿ, ಕರಬುರಗಿ ಆಗಲಿ ಯಾವುದೇ ಹತ್ಯೆಗೂ ಸಂಘ ಪರಿವಾರಕ್ಕೂ ಸಂಬಂಧವೇ ಇಲ್ಲ, ಸಂಘ ಪರಿವಾರದತ್ತ ಬೆರಳು ಮಾಡಿದವರಿಗೆ ಕೆ.ಎಸ್ ಈಶ್ವರಪ್ಪ ಈಗ ಖಡಕ್ ಆಗಿಯೇ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಅನಗತ್ಯವಾಗಿ ಆರೋಪ ಮಾಡಲಾಗುತ್ತಿದ್ದು, ಸರ್ಕಾರ ಹಾಗೂ ವಿಚಾರವಾದಿಗಳ ಗೊಡ್ಡು ಬೆದರಿಕೆಗೆ ಸಂಘ ಪರಿವಾರ ಹೆದರುವುದಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿರುವ ಅವರು, ಗೌರಿ ಲಂಕೇಶ್ ಹತ್ಯೆ ಖಂಡಿಸಿ ಪ್ರತಿರೋಧ ಸಮಾವೇಶ ಮಾಡಿದ್ದು, ಹತ್ಯೆಯಲ್ಲಿ ಸಂಘ ಪರಿವಾರದ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಸಂಘ ಪರಿವಾರ ಯುವಕರಲ್ಲಿ ದೇಶ ಭಕ್ತಿ ಉಂಟು ಮಾಡುವ ಕೆಲಸ ಮಾಡುತ್ತಿದ್ದು, ಪರಿವಾರಕ್ಕೆ ಕೊಲೆ- ಸುಲಿಗೆಗಳ ನಂಬಿಕೆ ಇಲ್ಲ, ವೈಚಾರಿಕವಾಗಿ ಸಂಘರ್ಷ ಆಗಬಹುದು ಎಂದು ಕಿಡಿ ಕಾರಿದರು.
ಕಲಬುರ್ಗಿ ಹತ್ಯೆಗೂ ಸಂಘ ಪರಿವಾರಕ್ಕೂ ನಂಟಿದೆ ಎಂದು ಆರೋಪ ಮಾಡಲಾಗುತ್ತಿದೆ. ಕಲಬುರಗಿ ಹತ್ಯೆ ಕೋರರನ್ನು ಹಿಡಿಯದಂತೆ ನಾವೇನು ಸರ್ಕಾರಕ್ಕೆ ಅಡ್ಡಿ ಪಡಿಸುತ್ತಿಲ್ಲ, ಸರ್ಕಾರ ಯಾಕೆ ಹತ್ಯೆಕೋರರನ್ನು ಹಿಡಿಯುತ್ತಿಲ್ಲ. ಹತ್ಯೆಗೈದಿದ್ದರೆ
ಪರಿವಾರದವರನ್ನು ಸರ್ಕಾರ ಯಾಕೆ ಬಂಧಿಸುತ್ತಿಲ್ಲ ಎಂದು ಗುಡುಗಿದರು.
Comments