ತಮಿಳುನಾಡು ಸರ್ಕಾರವನ್ನು ಉರುಳಿಸುತ್ತೇನೆ - ದಿನಕರನ್
ಚೆನ್ನೈ: ಎಐಎಡಿಎಂಕೆ ಕೆ. ಪಳನಿಸ್ವಾಮಿ ನೇತೃತ್ವದ ತಮಿಳು ನಾಡು ಸರಕಾರವನ್ನು ಉರುಳಿಸಿಯೇ ತಿರುತ್ತೇನೆ ಎಂದು ಉಚ್ಛಾಟಿತ ಎಐಡಿಎಂಕೆ ಉಪಪ್ರಧಾನ ಕಾರ್ಯದರ್ಶಿ ಟಿ.ವಿ ದಿನಕರನ್ ಪಣ ತೊಟ್ಟಿದ್ದಾರೆ.
ಚೆನ್ನೈ: ಎಐಎಡಿಎಂಕೆ ಕೆ. ಪಳನಿಸ್ವಾಮಿ ನೇತೃತ್ವದ ತಮಿಳು ನಾಡು ಸರಕಾರವನ್ನು ಉರುಳಿಸಿಯೇ ತಿರುತ್ತೇನೆ ಎಂದು ಉಚ್ಛಾಟಿತ ಎಐಡಿಎಂಕೆ ಉಪಪ್ರಧಾನ ಕಾರ್ಯದರ್ಶಿ ಟಿ.ವಿ ದಿನಕರನ್ ಪಣ ತೊಟ್ಟಿದ್ದಾರೆ.
ತಾಜಾ ಬೆಳವಣಿಗೆಗೆ ಪ್ರತಿಕ್ರಿಯೆ ನೀಡಿರುವ ಅವರು, ಹೆಚ್ಚಿನ ಸಚಿವರು ತಾವು ಚುನಾವಣೆಯಲ್ಲಿ ಸೋತವೆಂಬ ಭೀತಿ ಹೊಂದಿದ್ದಾರೆ. ಆದುದರಿಂದಲೇ ನಾವು ಡಿಎಂಕೆ ಜತೆ ಕೈ ಜೋಡಿಸಿದ್ದೇವೆ ಎಂದು ಅವರು ಆರೋಪಿಸಿದ್ದಾರೆ. ನನ್ನ ಎದುರಾಳಿಗಳು ತಮಗೆ ಜನ ಬೆಂಬಲ ಇದೆ ಎಂದು ಭಾವಿಸುವುದಾದರೆ ಅವರು ಹೊಸ ಚುನಾವಣೆಗಳನ್ನು ನಡೆಸಿ ಸ್ಪರ್ಧೆಗಿಳಿಯಬೇಕು ಎಂದು ಸವಾಲು ಹಾಕಿದ್ದಾರೆ. ಆಳುವ ಎಐಡಿಎಂಕೆ ಮಹಾ ಮಂಡಳಿ ತನ್ನನ್ನು ಹಾಗೂ ತನ್ನ ಚಿಕ್ಕಮ್ಮ ವಿ.ಕೆ ಶಶಿಕಲಾ ರನ್ನು ಪಕ್ಷದ ಉನ್ನತ ಹುದ್ದೆ ಯಿಂದ ಕಿತ್ತು ಹಾಕಿದುದ್ದನ್ನು ಅನುಸರಿಸಿ ದಿನಕರನ್ ಈ ಪ್ರತಿಜ್ಞೆ ಮಾಡಿದ್ದಾರೆ.
Comments