ಸಿದ್ದರಾಮಯ್ಯ ವಿರುದ್ಧ ಶೋಭಾ ಕರಂದ್ಲಾಜೆ ಬಿಚ್ಚಿಡುತ್ತಿರುವ ಸ್ಪೋಟಕ ಮಾಹಿತಿ ಏನು ?

ಪ್ರತಿಪಕ್ಷ ಶಾಸಕರು ಹಾಗೂ ಮುಖಂಡರನ್ನು ಕಾಂಗ್ರೆಸ್ಗೆ ಸೇರಿಸಿಕೊಳ್ಳಲು ಖುದ್ದು ಸಿದ್ದರಾಮಯ್ಯ ಕರೆ ಮಾಡಿ ಆಮಿಷ ಒಡ್ಡಿದ್ದಾರೆ. ಶೀಘ್ರದಲ್ಲೇ ಶಾಸಕರು ಈ ಸ್ಪೋಟಕ ಮಾಹಿತಿ ಬಿಚ್ಚಿಡಲಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ…
ನನಗೆ ಸಂಪೂರ್ಣ ಮಾಹಿತಿಯಿದೆ. ಬಿಜೆಪಿ, ಜೆಡಿಎಸ್, ಪಕ್ಷೇತರ ಶಾಸಕರು ಹಾಗೂ ಕೆಲ ಮುಖಂಡರಿಗೆ 25 ಕೋಟಿ ರೂ. ಆಮಿಷ ವೊಡ್ಡಲಾಗಿದೆ. ಕೆಲ ಮುಖಂಡರಿಗೆ ಚುನಾವಣೆಗೆ ನಿಲ್ಲದಂತೆ ಮಾಡುವುದು, ಕೆಲ ಶಾಸಕರಿಗೆ ಕಾಂಗ್ರೆಸ್ನಿಂದ ಟಿಕೆಟ್ ನೀಡುವ ಭರವಸೆ ನೀಡಲಾಗಿದೆ. ಜತೆಗೆ ಧಮ್ಕಿ ಹಾಕುತ್ತಿದ್ದಾರೆ.
ಸಿಎಂ ಖುದ್ದಾಗಿ ಶಾಸಕರಿಗೆ ಪೋನ್ ಮಾಡಿ 25 ಕೋಟಿ ರೂ. ಆಮಿಷವೊಡ್ಡಿರುವ ಆಧಾರವಿದೆ. ಅವರು ದೂರವಾಣಿ ಕರೆ ಮಾಡಿ ಆಮಿಷವೊಡ್ಡಿರುವ ಜತೆ ಹೈಕಮಾಂಡ್ ಭೇಟಿ ಮಾಡಿಸಿ ಟಿಕೆಟ್ ನೀಡಿಸುವ ಭರವಸೆ ನೀಡುತ್ತಿದ್ದಾರೆ. ಅದರ ಬಗ್ಗೆ ಶಾಸಕರೇ ಎಲ್ಲರ ಮುಂದೆ ಮಾಹಿತಿ ನೀಡಲಿದ್ದಾರೆ.
Comments