ಆಸ್ಪತ್ರೆ ಗಳಿಗೆ ಬ್ಯಾಂಡೇಜ್ ಬಟ್ಟೆ ಖರೀದಿಸಲಾಗದಷ್ಟು ಆಧೋಗತಿಗೆ ತಲುಪಿದ ಅರೋಗ್ಯ ಇಲಾಖೆ
ಸೆ. 12 ಸರಿಸುಮಾರು 1.80ಲಕ್ಷ ಕೋಟಿ ಬಜೆಟ್ ಮಂಡಿಸಿರುವ ರಾಜ್ಯ ಸರ್ಕಾರ ಕನಿಷ್ಠ ಸರ್ಕಾರಿ ಆಸ್ಪತ್ರೆಗಳಿಗೆ ಬ್ಯಾಂಡೇಜ್ ಬಟ್ಟೆ ಮತ್ತು ಹತ್ತಿ ಖರೀದಿಸಲು ಹಣವಿಲ್ಲದಷ್ಟು ಅಧೋಗತಿಗೆ ತಲುಪಿದೆ.ಬೆಂಗಳೂರಿನ ಕೆ.ಸಿ ಜನರಲ್, ವಿಕ್ಟೊರಿಯಾ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ತಾಲೂಕು, ಹೋಬಳಿಗಳ ಸುಮಾರು ಎರಡು ಸಾವಿರ ಆಸ್ಪತ್ರೆಗಳಲ್ಲಿ ಬ್ಯಾಂಡೇಜ್ ಹತ್ತಿ ಇಲ್ಲದೆ ಸಾರ್ವಜನಿಕರು ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಒಂದು ವೇಳೆ ಗಾಯಾಳುಗಳು ಇಲ್ಲವೇ ಗರ್ಭಿಣಿಯರು ಬಂದರೆ ಖಾಸಗಿಯವರಿಂದ ಹಣ ಕೊಟ್ಟು ಖರೀದಿ ಮಾಡಿಕೊಂಡು ಬರಬೇಕು. ಖುದ್ಧು ವೈದ್ಯರೇ ಮುಂಗಡವಾಗಿ
ಸೂಚಿಸುತ್ತಾರೆ.ಈ ಬಗ್ಗೆ ಅರೋಗ್ಯ ಮತ್ತು ಕುಟುಂಬ ಇಲಾಖೆ ಸಚಿವ ರಮೇಶಕುಮಾರ್ ಮಾತ್ರ ತಮಗೂ ಇದಕ್ಕೂ ಸಂಬಂಧ ಇಲ್ಲ ಎಂಬಂತೆ ಮೌನ ವಹಿಸಿದ್ದಾರೆ.
Comments