ರಾಜಕಾರಣವೆಂದರೆ ಕೇವಲ ಜಾತಿ, ಹಣವಲ್ಲ- ಅನಂತ್ ಕುಮಾರ್ ಹೆಗ್ಡೆ

ರಾಜಕಾರಣವೆಂದರೆ ಕೇವಲ ಜಾತಿ, ಹಣವಲ್ಲ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿದ್ದಾರೆ.
ನವದಹೆಲಿ: ರಾಜಕಾರಣವೆಂದರೆ ಕೇವಲ ಜಾತಿ, ಹಣವಲ್ಲ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿದ್ದಾರೆ. ನಯಾಪೈಸೆ ಖರ್ಚು ಮಾಡದೇ ಐದು ಬಾರಿ ಸಂಸದನಾಗಿದ್ದೇನೆ. ನಾನು ಯಾವತ್ತೂ ತಲೆ ತಗ್ಗಿಸುವ ಕೆಲಸ ಮಾಡಿಲ್ಲ. ಜನರೊಂದಿಗೆ ನಿರಂತರ ಸಂಪರ್ಕವಿರುವುದೇ ನನ್ನ ಗೆಲುವಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ. ಜನರಿಗಾಗಿ ಮಾಡಿದ ಹೋರಾಟಗಳಿಂದಾಗಿ ನನ್ನ ಮೇಲೆ ಕೆಲವು ಆರೋಪಗಳಿವೆ. ಆದರೆ, ಜಾತಿಗಾಗಿ ಮತ್ತು ಹಣಕ್ಕಾಗಿ ಯಾವತ್ತೂ ಆಸೆಪಟ್ಟವನಲ್ಲ ಎಂದರು.
ಕೌಶಲ್ಯವಿರುವವರನ್ನು ಗುರುತಿಸಿ ತರಬೇತಿ ನೀಡುತ್ತೇವೆ. ರಾಜ್ಯದ ಜನತೆ ಕೇಂದ್ರ ಸರಕಾರದಿಂದ ಹೆಚ್ಚಿನ ಲಾಭ ಪಡೆಯಬೇಕಾಗಿದೆ ಎಂದು ಹೇಳಿದ್ದಾರೆ.ಮುಂಬರುವ 2018 ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದೆ ಎನ್ನುವ ವಿಶ್ವಾಸವಿದೆ. ಬಿಎಸ್ ವೈ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗ್ಡೆ ಭವಿಷ್ಯ ನುಡಿದರು.
Comments