10 ವರ್ಷಗಳ ಹಿಂದೆಯೇ ಉಪೇಂದ್ರರ ರಾಜಕೀಯ ಕಾನ್ಸೆಪ್ಟ್ ಮಾಡಿದ್ರು ಕುಮಾರಣ್ಣ






ಕರ್ನಾಟಕ ರಾಜ್ಯದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದಂತಹ ಆಡಳಿತ ಯಾವುದಾದರು ಇದ್ದರೆ, ಅದು ಹೆಚ್.ಡಿ. ಕುಮಾರಸ್ವಾಮಿ ಅವರ ಜನಪರ ಆಡಳಿತ ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ. 2006-07ರಲ್ಲಿ ಕರ್ನಾಟಕ ರಾಮರಾಜ್ಯವಾಗಿತ್ತು ಎಂದು ಹಲವು ರಾಜಕೀಯ ವಿಶ್ಲೇಷಕರು ವಿಶ್ಲೇಷಿಸುತ್ತಾರೆ. ಇದಕ್ಕೆಲ್ಲಾ ಕಾರಣ ಹತ್ತು ವರ್ಷಗಳ ಹಿಂದೆಯೇ ಕುಮಾರಸ್ವಾಮಿ ಮಾಡಿದ ‘ಪ್ರಜಾಕೀಯ’.
ಇತ್ತೀಚೆಗೆ ನಟ ಉಪೇಂದ್ರ ಅವರು ರಾಜಕೀಯದ ಬದಲು ಪ್ರಜಾಕೀಯದ ಮಂಡನೆ ಮಾಡಿದರು. ಆದರೆ, ಕರ್ನಾಟಕದ ಜನರಿಗೆ ಇದು ಹೊಸ ಕಾನ್ಸೆಪ್ಟ್ ಏನು ಅಲ್ಲ! ಹತ್ತು ವರ್ಷಗಳ ಹಿಂದೆಯೇ ಕುಮಾರಸ್ವಾಮಿ ಅವರು ರಾಜ್ಯದ ಜನರಿಗೆ ‘ಪ್ರಜಾಕೀಯ’ ಮಾಡಿ ತೋರಿಸಿದ್ದಾರೆ
ಪ್ರಜಾಕೀಯ ಎಂದರೆ ಏನು?
ದೂರು ಹೊತ್ತು ದೊರೆಯಿದ್ದಲ್ಲಿಗೆ ಜನರು ಹೋಗುವ ಬದಲಾಗಿ ದೂರಿದ್ದಲ್ಲಿಯೇ ದೊರೆ ಬರುವುದು ಪ್ರಜಾಕೀಯ. ಇದು ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಂತಹ ಸಂದರ್ಭದಲ್ಲಿನ ಆಡಳಿತ ವೈಖರಿಯನ್ನು ಕರಾರುವಕ್ಕಾಗಿ ಹೋಲುತ್ತದೆ.
೧. ಜನತಾದರ್ಶನ
ಮೊಟ್ಟಮೊದಲ ಬಾರಿಗೆ ಹೆಚ್ಡಿಕೆ ಮಾಡಿದ ಜನತಾದರ್ಶನ ಕಾರ್ಯಕ್ರಮದಿಂದ ಲಕ್ಷಾಂತರ ಜನರು ನೇರವಾಗಿ ಮುಖ್ಯಮಂತ್ರಿಯೊಂದಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಸ್ಥಳದಲ್ಲೇ ಪರಿಹಾರ ಕಂಡುಕೊಂಡಿದ್ದಾರೆ. ಅದೆಷ್ಟೋ ದಿವಸ ಸಮಸ್ಯೆಗಳೊಂದಿಗೆ ಸರ್ಕಾರೀ ಕಚೇರಿಗಳಿಗೆ ಅಲೆದು ಬೇಸತ್ತಿದ್ದ ಜನರು ತ್ವರಿತವಾಗಿ ಸಿಕ್ಕ ಪರಿಹಾರದಿಂದ ಸಂತುಷ್ಟಗೊಂಡು ಹರಸಿದ್ದಾರೆ
೩. ರೈತ ಸಂವಾದ
ರೈತರ ಕಷ್ಟಗಳನ್ನು ಎ.ಸಿ ರೂಮಿನಲ್ಲಿ ಕೂತು ಬಗೆಹರಿಸಲು ಸಾಧ್ಯವೇ? ಇದನ್ನರಿತ ಹೆಚ್ಡಿಕೆ ರಾಜ್ಯದ ನಾನಾ ಭಾಗಗಳಿಂದ ರೈತರನ್ನು ಕರೆಸಿ ರೈತರೊಡನೆ ಸಂವಾದ ಕಾರ್ಯಕ್ರಮ ನಡೆಸಿದ್ದರು. ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿದ್ದರಿಂದಲೋ ಏನೋ ಕುಮಾರಸ್ವಾಮಿ ಅವರ ಆಡಳಿತಾವಧಿಯಲ್ಲಿ ರೈತರ ಆತ್ಮಹತ್ಯೆಗಳೇ ಆಗುತ್ತಿರಲಿಲ್ಲ.
೫. ಗ್ರಾಮ ವಾಸ್ತವ್ಯ
ಒಬ್ಬ ಮುಖ್ಯಮಂತ್ರಿ ಎಂದರೆ, ಬರೀ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುವ ಈ ಕಾಲದಲ್ಲಿ, ಮುಖ್ಯಮಂತ್ರಿ ಅವರು ತಮ್ಮ ಹಳ್ಳಿಗೆ ಬಂದು ತಮ್ಮ ಮನೆಯಲ್ಲೇ ಮಲಗುತ್ತಾರೆ ಎಂಬುದನ್ನು ಜನರು ನಂಬಲೂ ತಯಾರಿರಲಿಲ್ಲ! ಇದನ್ನು ಸಾಧಿಸಿ ತೋರಿಸಿದ್ದು ಹೆಚ್.ಡಿ. ಕುಮಾರಸ್ವಾಮಿ. ದಲಿತರು, ಹೆಚ್.ಐ.ವಿ ಪೀಡಿತರು, ಅಲ್ಪಸಂಖ್ಯಾತರು, ಸಮಾಜದ ಎಲ್ಲಾ ಜಾತಿ-ವರ್ಗದ ಜನರನ್ನು ಒಂದಾಗಿ ಕಂಡು ಸಾಮರಸ್ಯ ಸಾರುವ ಇವರ ಈ ಯೋಜನೆ ಜಗತ್ಪ್ರಸಿದ್ದ ಗಣ್ಯರಿಂದ ಪ್ರಶಂಸೆಗೊಳಗಾಯಿತು.
೬. ಹೆಣ್ಣು ಮಕ್ಕಳಿಗೆ ಉಚಿತ ಸೈಕಲ್ ವಿತರಣೆ
ನಮ್ಮ ರಾಜ್ಯದಲ್ಲಿ ಅದೆಷ್ಟೋ ತಂದೆ-ತಾಯಿಯಂದಿರು ತಮ್ಮ ಹೆಣ್ಣು ಮಗಳು ಹೈ ಸ್ಕೂಲ್ ಬಂದೊಡನೆ ಶಾಲೆಗೆ ಕಳುಹಿಸುವುದು ನಿಲ್ಲಿಸುತ್ತಿದ್ದರು. ಅವರಿಗೆ ಮಗಳ ರಕ್ಷಣೆಯ ಚಿಂತೆ. ಮಗಳು ಒಬ್ಬಳೇ ಕಿಲೋಮೀಟರ್ ಗಟ್ಟಲೆ ನಡೆದುಕೊಂಡು ಹೋಗಬೇಕಾಗುತ್ತದೆ. ಇದು ಅಸುರಕ್ಷಿತ ಎಂಬ ಭಾವನೆಯಿಂದ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಇದನ್ನು ತಡೆಗಟ್ಟಲೆಂದೇ ಕುಮಾರಸ್ವಾಮಿ ಅವರು ಸರ್ಕಾರಿ ಶಾಲೆಯಲ್ಲಿ ಹೈ ಸ್ಕೂಲ್ ಓದುತ್ತಿರುವ ಎಲ್ಲಾ ಹೆಣ್ಣು ಮಕ್ಕಳಿಗೆ ಉಚಿತವಾಗಿ ಸೈಕಲ್ ವಿತರಣೆ ಮಾಡಿದರು. ಇದರಿಂದ ಲಕ್ಷಾಂತರ ಹೆಣ್ಣು ಮಕ್ಕಳು ತಮ್ಮ ಶಿಕ್ಷಣ ಮುಂದುವರೆಸಿ, ಇಂದು ದೊಡ್ಡ ದೊಡ್ಡ ಹುದ್ದೆ ಅಲಂಕರಿಸಿದ್ದಾರೆ.
ಇದೇ ಅಲ್ಲವೇ ಪ್ರಜಾಕೀಯ?
ಕುಮಾರಸ್ವಾಮಿ ಆಡಳಿತದ ಆ ದಿನಗಳನ್ನು ನೆನೆದರೆ ಇಂದಿಗೂ ರೋಮಾಂಚನವಾಗುತ್ತದೆ. ಸಮ್ಮಿಶ್ರ ಸರ್ಕಾರದ ಅನೇಕ ಮಿತಿಗಳನ್ನು ಮೀರಿ ಜನಪರ ಆಡಳಿತ ನೀಡಿದ ಕುಮಾರಸ್ವಾಮಿ ಅವರನ್ನು ಒಂದು ದಶಕದ ನಂತರವೂ ಇನ್ನೂ ಜನರು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ನೀವು ಯಾವ ಪಕ್ಷದವರಾದರೂ ಆಗಿರಿ, ನಿಮ್ಮ ಮನಸ್ಸಿನಲ್ಲಿಯೂ ಒಂದು ಕಡೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರೆ ಚೆನ್ನಾಗಿರ್ತಿತ್ತೋ ಏನೋ ಎಂಬ ಭಾವನೆ ಮೂಡಿರುತ್ತದೆ. ಇದೇ ಅಲ್ಲವೇ ಪ್ರಜಾಕೀಯ?
Comments