ಜೆಡಿಎಸ್ ಪಕ್ಷ ಸಂಘಟನೆಗಾಗಿ ಎಚ್.ಡಿ.ಡಿ ಹಾಗೂ ಎಚ್.ಡಿ.ಕೆ ನಡೆಸಲಿದ್ದಾರೆ ರಾಜ್ಯ ಪ್ರವಾಸ

ಪಕ್ಷ ಸಂಘಟನೆಗಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮೂರು ತಿಂಗಳು ನಿರಂತರ ಪ್ರವಾಸ ಮಾಡಲು ನಿಶ್ಚಯಿಸಿದ್ದಾರೆ.
ಎರಡು ತಂಡಗಳಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಮುಂದಿನ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುತ್ತೇವೆ ಎಂದು ದೇವೇಗೌಡರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬೂತ್ ಕಮಿಟಿ, ತಾಲೂಕು ಘಟಕ ರಚನೆ ಕಾರ್ಯ ನಡೆದಿದೆ. ಸಂಘಟನೆ ಹಿಂದೆ ಬಿದ್ದಿರುವ ಕಡೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಿದ್ದೇವೆ ಎಂದರು. ಮಂಗಳೂರು ಪ್ರಕರಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡವಳಿಕೆ ಖಂಡನೀಯ. ಶಕ್ತಿ ಪ್ರದರ್ಶನದ ಅವಶ್ಯಕತೆ ಇಲ್ಲ. ಸಮಸ್ಯೆಯನ್ನು ಕಾನೂನು ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
Comments