ಮೂವರು ಪತ್ರಕರ್ತರನ್ನು ಸಾವಿನಿಂದ ತಪ್ಪಿಸಿದ್ದರು ಮಾಜಿ ಗೃಹ ಸಚಿವ ಆರ್.ಅಶೋಕ್..!

ಬೆಂಗಳೂರ: ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ನಡೆದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ದಿಟ್ಟ ಪತ್ರಕರ್ತರಿಗೆ ಉಳಿಗಾಲವಿಲ್ಲವಾ ಎಂಬ ಪ್ರಶ್ನೆ ಮತ್ತೊಮ್ಮೆ ಮೊಳಕೆಯೊಡೆದಿದೆ. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲೂ ಮೂವರು ಪತ್ರಕರ್ತರು ಮತ್ತು ಪತ್ರಿಕೋದ್ಯಮಿಗಳನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು.
ಸುವರ್ಣನ್ಯೂಸ್'ನ ಪತ್ರಕರ್ತರಾಗಿದ್ದ ಪ್ರತಾಪ್ ಸಿಂಹ, ವಿಶ್ವೇಶ್ವರ ಭಟ್ ಹಾಗೂ ವಿಜಯವಾಣಿ ಸಂಸ್ಥಾಪಕ ವಿಜಯ್ ಸಂಕೇಶ್ವರ ಅವರ ಹತ್ಯೆಗೆ ಸಂಪೂರ್ಣ ಸ್ಕೆಚ್ ಹಾಕಲಾಗಿತ್ತು. ಆದರೆ, ಆಗ ಗೃಹಸಚಿವರಾಗಿದ್ದ ಆರ್.ಅಶೋಕ್ ಅವರು ಗುಪ್ತಚರರಿಂದ ಈ ಬಗ್ಗೆ ಮಾಹಿತಿ ಪಡೆದು ಕೂಡಲೇ ಬಂದೋಬಸ್ತ್ ಮಾಡಿಸಿದರು. ಮೂವರನ್ನು ಒಂದು ಸ್ಥಳಕ್ಕೆ ಕರೆಸಿ ಎಲ್ಲವನ್ನೂ ವಿವರಿಸಿ ಮುಂಜಾಗ್ರತಾ ಕ್ರಮ ಕೈಗೊಂಡರು. ಬಳಿಕ ಎರಡನೇ ದಿನದಲ್ಲಿ ಆರೋಪಿಗಳನ್ನು ಹಿಡಿದುಹಾಕಿದರು.
ದುಷ್ಕರ್ಮಿಗಳು ಹತ್ಯೆಗೆ ಸಂಚು ರೂಪಿಸಿರುವ ಎಲ್ಲಾ ವಿವರವನ್ನೂ ರಾಜ್ಯದ ಪೊಲೀಸ್ ಇಂಟೆಲಿಜೆನ್ಸ್'ನವರು ನಿಖರವಾಗಿ ಕಲೆಹಾಕಿದ್ದರಂತೆ. ದುಷ್ಕರ್ಮಿಗಳು ಖರೀದಿಸಿದ ಆಯುಧಗಳು, ಪಡೆದ ಹಣ, ಕೊಲೆಗೆ ಫಿಕ್ಸ್ ಆದ ದಿನಾಂಕ, ಸ್ಥಳ ಇತ್ಯಾದಿ ಸಂಪೂರ್ಣ ವಿವರಗಳನ್ನ ಗುಪ್ತಚರರು ಸಂಗ್ರಹಿಸಿದ್ದರು ಎಂದು ಸುವರ್ಣನ್ಯೂಸ್ ಜೊತೆ ಮಾಜಿ ಗೃಹಸಚಿವರಾದ ಆರ್.ಅಶೋಕ್ ಅಭಿಪ್ರಾಯ ಹಂಚಿಕೊಂಡರು.
Comments