ಕಾಪ್ಸ್ ಸಮೀಕ್ಷೆ ಪ್ರಕಾರವು ಕರ್ನಾಟಕಲ್ಲಿ ಮತ್ತೆ ಅರಳಲಿದೆ ಕಮಲ

ಬೆಂಗಳೂರು: ಸಿ ಫೋರ್ ಸಂಸ್ಥೆ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ನಂತರ ಕಾಪ್ಸ್ ಸಂಸ್ಥೆ ತನ್ನ ವರದಿಯನ್ನು ಪ್ರಕಟಿಸಿದೆ.
ಕಾಪ್ಸ್ ಸಂಸ್ಥೆ ಬುಧವಾರ ಪ್ರಕಟಿಸಿರುವ ವರದಿಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಒಂದು ವೇಳೆ ಈಗ ಚುನಾವಣೆ ನಡೆದರೆ ಯಾವ ಪಕ್ಷಕ್ಕೆ ಬಹುಮತ ಸಿಗಲಿದೆ? ಎಂಬ ಪ್ರಶ್ನೆ ಹೊತ್ತು ಕಾಪ್ಸ್ ಸಂಸ್ಥೆ ಸಮೀಕ್ಷೆ ನಡೆಸಿತ್ತು.
ಕಾಪ್ಸ್ ವರದಿಯಂತೆ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿಗೆ 113 ಸ್ಥಾನಗಳು ಲಭಿಸಲಿದೆ. 2008ರಲ್ಲಿ ರಾಜ್ಯದಲ್ಲಿ ಕಮಲ ಅರಳಿದಾಗಲೂ ಇಷ್ಟೇ ಸ್ಥಾನಗಳನ್ನು ಗಳಿಸಿತ್ತು ಎಂಬುದು ಗಮನಾರ್ಹ. ಕರ್ನಾಟಕದ ಕರಾವಳಿ ಭಾಗದಲ್ಲಿ ಪರಿಸ್ಥಿತಿ ಹದಗೆಟ್ಟ ಸಂದರ್ಭದಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು.
Comments