ಬಿಜೆಪಿ ಸಹವಾಸ ಮಾಡಿ ತಪ್ಪು ಮಾಡಿದೆವು…! ಎಚ್.ಡಿ.ಡಿ
ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಲು ಸಮಾವೇಶ ಮಾಡುತ್ತಿಲ್ಲ, ಜೆಡಿಎಸ್ ಪಕ್ಷ ಉಳಿಸಲು ಬಂದಿರುವೆ ಎಂದು ಹರಪನಹಳ್ಳಿ ತಾಲೂಕಿನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಬಿಜೆಪಿ ಜತೆ ಸಹವಾಸ ಮಾಡಿದ್ದೆ ನಮ್ಮ ತಪ್ಪು, ಎಚ್.ಡಿ.ಕುಮಾರಸ್ವಾಮಿ ಗ್ರಾಮವಾಸ್ತವ್ಯ ಭಾರತದಲ್ಲಿಯೇ ಪ್ರಥಮ ಎಂದು ಹೇಳಿದ ಅವರು ಈ ದೇವೇಗೌಡ ಹುಟ್ಟಿರೋದು ಹೋರಾಟಕ್ಕೆ ನಾನು ಹೋರಾಟ ಮಾಡುವೆ. ಎಸ್ ಟಿ ಸಮುದಾಯಕ್ಕೆ ಮೀಸಲಾತಿ ಬೇಕೆಂದು ಒತ್ತಾಯ ಮಾಡಿದ್ದೆ ಇದರಿಂದ ಇಂದು ST ಸಮುದಾಯದವರು 10 ಕ್ಕೂ ಅಧಿಕ ಮಂದಿ ಶಾಸಕರಾಗಿದ್ದಾರೆ ಎಲ್ಲಾ ವರ್ಗದ ಸಮುದಾಯದವರಿಗೂ ತಮ್ಮ ಅಧಿಕಾರವಧಿಯಲ್ಲಿ ಮೀಸಲು ಸಿಗುವಂತೆ ಮಾಡಲಾಗಿದೆ ಆದ್ರೆ ಯಾರು ಈ ಬಗ್ಗೆ ಮಾತಾಡಲ್ಲ ನನಗೆ ನಾನೇ ಹೇಳಿಕೊಳ್ಳಬೇಕು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಯಾವ ರಾಜ್ಯದಲ್ಲಿ ಮುಸ್ಲಿಂರಿಗೆ ಮೀಸಲಾತಿ ನೀಡಿದ್ದಾರೆ ಹೇಳಲಿ ಎಲ್ಲರಿಗೂ ಅಧಿಕಾರ ಸಿಗುವಂತೆ ಮಾಡಿದ್ದೇವೆ ಈ ರಾಜ್ಯದ ಜನ ಸಂಪೂರ್ಣ ಬೆಂಬಲ ನೀಡಿದರೆ ಅಧಿಕಾರ ಮಾಡು ಎಂದು ಕುಮಾರಸ್ವಾಮಿ ಯವರಿಗೆ ಹೇಳಿದ್ದೇನೆ ಆದರೆ ಯಾರ ಸಹವಾಸ ಬೇಡ ವಿರೋಧ ಪಕ್ಷದಲ್ಲಿದ್ದು ಕೆಲಸ ಮಾಡಲು ಕುಮಾರಸ್ವಾಮಿಗೆ ಹೇಳಿರುವೆ ಎಂದರು.
Comments