'ಮಂಗಳೂರು ಚಲೋ' ರ್ಯಾಲಿಗೆ ಯಾರ ಅಪ್ಪಣೆ ಬೇಕಾಗಿಲ್ಲ- ಬಿಎಸ್ ವೈ

ಮಂಗಳೂರು: ಹಿಂದೂ ಮುಖಂಡರ ಹತ್ಯೆ ಖಂಡಿಸಿ ಬಿಜೆಪಿ ನಡೆಸಲಿರುವ ರ್ಯಾಲಿಗೆ ಸಿಎಂ ಸಿದ್ದರಾಮಯ್ಯ ತಡೆಹಾಕುವ ಉದ್ದೇಶ ಹೊಂದಿದ್ದಾರೆ ಎಂಬ ಸುದ್ದಿಗೆ ಬಿಎಸ್ ವೈ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳೂರು ಚಲೋ ರ್ಯಾಲಿಗೆ ಯಾರ ಅಪ್ಪಣೆಯೂ ಬೇಕಾಗಿಲ್ಲ. ನಾವು ಯಾರ್ಲಿ ಮಾಡಿಯೇ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ಅವರದು ವಿನಾಶ ಕಾಲ ವಿಪರೀತ ಬುದ್ಧಿ ಎಂಬಂತೆ ವರ್ತಿಸಿದ್ದಾರೆ. ತಡೆಯಲು ಮುಂದಾದ್ರೆ ಪರಿಣಾಮ ನೆಟ್ಟಗಿರಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಸೆಪ್ಟೆಂಬರ್ 7ರಂದು ಹಮ್ಮಿಕೊಂಡಿರುವ ಮಂಗಳೂರು ಚಲೋ ರ್ಯಾಲಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಮಂಗಳೂರು ಚಲೋ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಮಾಹಿತಿ ಪಡೆಯುವಂತೆ ನೂತನ ಗೃಹಸಚಿವ ರಾಮಲಿಂಗಾರೆಡ್ಡಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.
ಇನ್ನು ಇದೇ ವೇಳೆ ರ್ಯಾಲಿ ತಡೆಯೋದು ಬೇಡ, ಹೊರಭಾಗದಿಂದ ಬರುವರನ್ನು ಪ್ರವೇಶಿಸದಂತೆ ತಡೆಯುವುದು ಸೂಕ್ತ ಎಂದು
ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದ್ರೆ ಯಾರ್ಲಿ ತಡೆಯೋದು ಬೇಡ. ಆದರೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಿ, ಶಾಂತಿ ಕದಡಲು ಮುಂದಾದರೆ ಕ್ರಮ ತೆಗೆದುಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
Comments