ತಮಿಳುನಾಡಿಗೆ ಹೆಚ್ಚಿನ ನೀರು ಯಾಕೆ? ಎಚ್.ಡಿ ದೇವೇಗೌಡ ಅಸಮಾಧಾನ

ತುಮಕೂರು: ಹೇಮಾವತಿ ಜಲಾಶಯದಿಂದ ಹೆಚ್ಚಿನ ನೀರು ತಮಿಳುನಾಡಿಗೆ ಸೇರುತ್ತಿದೆ, ನೀರು ಹರಿಸಲಾಗುತ್ತಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡ ಅಸಮಾಧಾನ ಹೊರಹಾಕಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿರುವ ಅವರು, ಕೆಆರ್ ಎಸ್ ಕಬಿನಿ, ಹಾರಾಂಗಿ ಜಲಾಶಯಗಳಲ್ಲಿ ಹೇಮಾವತಿ ಜಲಾಶಯಗಳಿಗಿಂತ ಹೆಚ್ಚಿನ ನೀರು ಸಂಗ್ರಹವಿದೆ.
ತುಮಕೂರು: ಹೇಮಾವತಿ ಜಲಾಶಯದಿಂದ ಹೆಚ್ಚಿನ ನೀರು ತಮಿಳುನಾಡಿಗೆ ಸೇರುತ್ತಿದೆ, ನೀರು ಹರಿಸಲಾಗುತ್ತಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡ ಅಸಮಾಧಾನ ಹೊರಹಾಕಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿರುವ ಅವರು, ಕೆಆರ್ ಎಸ್ ಕಬಿನಿ, ಹಾರಾಂಗಿ ಜಲಾಶಯಗಳಲ್ಲಿ ಹೇಮಾವತಿ ಜಲಾಶಯಗಳಿಗಿಂತ ಹೆಚ್ಚಿನ ನೀರು ಸಂಗ್ರಹವಿದೆ. ಹೇಮಾವತಿ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ. ಬೇಕಾದರೆ ಈ ಕುರಿತು ಅಂಕಿ ಅಂಶಗಳನ್ನು ಪರಿಶೀಲನೆ ಮಾಡಬಹುದು. ಆದಾಗ್ಯೂ ಹೇಮಾವತಿ ಜಲಾಶಯವನ್ನೇ ಗುರಿಯಾಗಿಟ್ಟುಕೊಂಡು ಇಲ್ಲಿಂದಲೇ ಹೆಚ್ಚಿನ ನೀರನ್ನು ಹರಿಸುತ್ತಿರುವುದರ ಹಿಂದಿನ ಉದ್ದೇಶ ಏನು ಎಂದು ಪ್ರಶ್ನಿಸಿದರು.
ಹಾಸನ ಜಿಲ್ಲೆಯ ಹೆಚ್ಚು ನೀರು ಹರಿಸಿಕೊಳ್ಳಲಾಗಿದೆ ಎಂಬ ದೂರಿನಲ್ಲಿ ಸತ್ಯಾಂಶವಿಲ್ಲ. ಅಲ್ಲಿ ಎಷ್ಟು ಕೆರೆ ತುಂಬಿವೆ, ಎಷ್ಟು ನೀರು ಹರಿದಿದೆ ಎಂಬುದನ್ನು ಭೇಟಿ ಮಾಡಿ ಯಾರಾದರೂ ಪರಿಶೀಲನೆ ನಡೆಸಬಹುದಾಗಿದೆ. ನೀರಿಲ್ಲ ಹೋರಾಟ ನಡೆಸಬೇಕು. ನೀವು ಧರಣಿ ಕುಳಿತುಕೊಳ್ಳಿ ಎಂದು ಶಾಸಕ ರೇವಣ್ಣ ಪ್ರತಿನಿತ್ಯ ನನಗೆ ಒತ್ತಡ ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಮನೆ ಮುಂದೆ ಧರಣಿ ಕುಳಿತುಕೊಳ್ಳಬೇಕೆ? ಅಥವಾ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮುಂದೆ ಧರಣಿ ಕುಳಿತುಕೊಳ್ಳಬೇಕೇ? ಎಂದು ಪ್ರಶ್ನಿಸಿದರು.
ಹೇಮಾವತಿ ಜಲಾಶಯವನ್ನೇ ಆಶ್ರಯಿಸಿದ ಹಾಸನ, ತುಮಕೂರು ಮತ್ತು ಮಂಡ್ಯ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಕೆರೆ ತುಂಬಿಸಿಕೊಳ್ಳಲೂ ಆಗಿಲ್ಲ, ಮೇಲ್ಘಾಗದಲ್ಲಿಯೇ ಕೆರೆ ತುಂಬಿಸಿಕೊಳ್ಳಲು ಗೋಳಾಡುತ್ತಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಈಚೆಗೆ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುರುವೇಕೆರೆ , ಗುಬ್ಬಿ, ತುಮಕೂರು ಮಹಾನಗರಕ್ಕೆ ಕುಡಿಯುವ ನೀರು ಪೂರೈಸಲು ಕೆರೆಗಳನ್ನು ತುಂಬಿಲ್ಲ. ಇಂತಹ ಪರಿಸ್ಥಿತಿ ಯಲ್ಲಿ ಏನು ಮಾಡಬೇಕು ಎಂಬುದಕ್ಕೆ ಸರ್ಕಾರ , ಈ ಜಿಲ್ಲೆಯ ಉಸ್ತುವಾರಿ ಸಚಿವ ಜಯಚಂದ್ರ ಗಮನಹರಿಸಬೇಕು ಎಂದು ಹೇಳಿದರು.
Comments