'ಪ್ರಶ್ನೆ ಕೇಳಿದರೆ ಮೋದಿಗೆ ಕೋಪ ಬರುತ್ತೆ' ! ಮಹಾರಾಷ್ಟ್ರ ಬಿಜೆಪಿ ಸಂಸದ

ನವದೆಹಲಿ: ಯಾರು ನಮ್ಮನ್ನು ಪ್ರಶ್ನಿಸಬಾರದು ಎನ್ನುವ ಮನೋಭಾವವನ್ನು ಪ್ರಧಾನಿ ಮೋದಿ ಹೊಂದಿದ್ದಾರೆ ಎಂದು ಸಂಸದರೊಬ್ಬರು ಬಹಿರಂಗವಾಗಿಯೇ ಟೀಕೆ ಮಾಡಿದ ಘಟನೆ ವರದಿಯಾಗಿದೆ.
ಪ್ರಧಾನಿ ಮೋದಿ ಅವರಿಗೆ ಪ್ರಶ್ನೆ ಮಾಡುವವರನ್ನು ಕಂಡರೇ ಆಗಿ ಬರುವುದಿಲ್ಲ, ಯಾರಾದರೂ ಅವರನ್ನು ಪ್ರಶ್ನಿಸಿದರೆ ಕೆಂಡದಂಥ ಕೋಪ ಬರುತ್ತದೆ. ಪ್ರತಿ ಬಾರಿ ನಮಗೆ ಪ್ರಶ್ನೆ ಕೇಳುವಾಗಲೆಲ್ಲಾ, ನಿಮಗೆ ಚುನಾವಣಾ ಪ್ರಣಾಳಿಕೆ ಬಗ್ಗೆ ಗೊತ್ತಿದೆಯೇ? ಸರ್ಕಾರದ ಯೋಜನೆಯ ಬಗ್ಗೆ ತಿಳಿದಿದೆಯೇ? ಎಂದು ಕೇಳುತ್ತಾರೆ ಎಂದು ನಾಗಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಹಾರಾಷ್ಟ್ರದ ಬಿಜೆಪಿ ಸಂಸದ ನಾನಾ ಪಟೊಲೆ ಹೇಳಿದ್ದಾರೆ.
ಸಂಸದರ ಸಭೆಯೊಂದರಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಿಮಗೆ ತಿಳಿದಿಯೇ ಎಂದು ನಾನು ಕೇಳಿದಾಗ ಮೋದಿ ಅವರಿಗೆ ತಕ್ಷಣ ಕೋಪ ಬಂದಿತು, 'ಹಸಿರು ತೆರಿಗೆ ಹೆಚ್ಚಿಸುವುದು, ಕೃಷಿ ವಲಯದಲ್ಲಿ ಕೇಂದ್ರ ಸರ್ಕಾರ ನೀಡುತ್ತಿರುವ ಅನುದಾನ ಹೆಚ್ಚಿಸುವುದು ಮತ್ತು ಹಿಂದುಳಿದ ವರ್ಗದವರಿಗಾಗಿ ಪ್ರತ್ಯೇಕ ಸಚಿವಾಲಯ ಆರಂಭಿಸುವ ಬಗ್ಗೆ ನಾನು ಅವರ ಗಮನ ಸೆಳೆದಿದ್ದೆ, ಸಲಹೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸುವ ಬದಲಿಗೆ, ಮೋದಿ ಅವರು ನನ್ನ ಮೇಲೆ ಕೋಪಗೊಂಡು (ಶಟ್ ಅಪ್) ಸುಮ್ಮನಿರಲು ಹೇಳಿ ಗದರಿದರು. ಆಗಾಗ ಸಂಸದರನ್ನು ಸಭೆಗೆ ಪ್ರಧಾನಿ ಮೋದಿ ಕರೆಯುತ್ತಿರುತ್ತಾರೆ, ಆದ್ರೆ ಅಲ್ಲಿ ಯಾರಾದರೂ ಪ್ರಶ್ನಿಸುವುದನ್ನು ಅವರು ಸಹಿಸುವುದಿಲ್ಲ, ಎಂದು ಹೇಳುವ ಮೂಲಕ ಬಹಿರಂಗವಾಗಿಯೇ ಮೋದಿ ಅವರ ಮೇಲೆ ಪಟೊಲೆ ಟೀಕೆ ವ್ಯಕ್ತಪಡಿಸಿದ್ದಾರೆ.
Comments