೧3 ಮಂದಿ ಪ್ರಮಾಣ ವಚನ, ನಾಲ್ಕು ಮಂದಿಗೆ ಬಡ್ತಿ, ಮೋದಿ ಸಚಿವ ಸಂಪುಟ ವಿಸ್ತರಣೆ

ನವದೆಹಲಿ: ಪ್ರಧಾನಿ ಮೋದಿ ಅವರು ಕಡೆಗೂ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಸೇರಿ ಒಟ್ಟು 9 ಮಂದಿ ಸಂಸದರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದೇ ವೇಳೆ ನಾಲ್ವರು ರಾಜ್ಯ ಖಾತೆ ಹೊಂದಿದ್ದ ಸಚಿವರಿಗೆ ಬಡ್ತಿ ದೊರೆತಿದೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋಲಿಂದ್ ಅವರು 9 ಮಂದಿಗೆ ಪ್ರಮಾಣ ವಚನ ಭೋದಿಸಿದರು. ಇದೇ ವೇಳೆ ಪ್ರಧಾನಿ ಮೋದಿ , ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವು ಪ್ರಮುಖ ನಾಯಕರು ಹಾಜರಿದ್ದರು.
ಬಿಹಾರದ ಅರ್ ಹಾ ಕ್ಷೇತ್ರದ ಸಂಸದ ರಾಜ್ ಕುಮಾರ್ ಸಿಂಗ್, ನಿವೃತ್ತ ಐಎಫ್ ಎಸ್ ಅಧಿಕಾರಿ ಹರ್ದಿಪ್ ಸಿಂಗ್ ಪುರಿ, ಉತ್ತರಪ್ರದೇಶದ ರಾಜ್ಯ ಸಭಾ ಸದಸ್ಯ ಶಿವ್ ಪ್ರತಾಪ್ ಶುಕ್ಲಾ , ಭಾಗ್ ಪತ್ ಕ್ಷೇತ್ರದ ಸಂಸದ ಸತ್ಯಪಾಲ್ ಸಿಂಗ್ , ನಿವೃತ್ತ ಐಎಎಸ್ ಅಧಿಕಾರಿ ಅಲ್ಪೋನ್ಸ್ ಕನ್ನಂಥಾನಮ್, ಬಕ್ಸಾರನ್ ಸಂಸದ ಅಶ್ವಿನ್ ಕುಮಾರ್ ಚೌಬೆ, ಜೋಧಪುರ್ ಸಂಸದ ಗಜೇಂದ್ರ ಸಿಂಗ್ , ಮಧ್ಯಪ್ರದೇಶ ಸಂಸದ ಡಾ. ವಿರೇಂದ್ರ ಕುಮಾರ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಅದೇ ರೀತಿ, ಅಬ್ಬಾಸ್ ನಖ್ವಿ, ನಿರ್ಮಲಾ ಸೀತಾರಾಮನ್ , ಧರ್ಮೇಂದ್ರ ಪ್ರದಾನ್, ಮತ್ತು ಪಿಯೂಷ್ ಗೋಯಲ್ ಅವರು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
Comments