ನಾಳೆ ಮೋದಿ ಸಂಪುಟ ಪುನಾರಚನೆ – ಕರ್ನಾಟಕದ ಈ ಮೂವರಿಗೆ ಮಂತ್ರಿ ಭಾಗ್ಯ ಸಾಧ್ಯತೆ

ರಾಜ್ಯ ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಇದೀಗ ಕೇಂದ್ರ ಸಚಿವ ಸಂಪುಟ ಕೂಡ ಪುನಾರಚನೆಯಾಗುತ್ತಿದೆ. ನಾಳೆ ಭಾನುವಾರ ಬೆಳಗ್ಗೆ 10 ಗಂಟೆಗೆ ಪ್ರಧಾನಿ ಮೋದಿ ಸಂಪುಟ ಪುನಾರಚನೆ ಆಗ್ತಿದೆ.
9 ಸಚಿವರು ಸಂಪುಟದಿಂದ ಔಟ್ ಆಗಲಿದ್ದಾರೆ. ಹೊಸದಾಗಿ ಸುಮಾರು 15 ಮಂದಿ ಸಂಪುಟ ಸೇರುತ್ತಿದ್ದು, 16 ಸಚಿವರ ಖಾತೆ ಬದಲಾಗುತ್ತಿದೆ. 6 ರಾಜ್ಯ ಸಚಿವರಿಗೆ ಬಡ್ತಿ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಸಂಪುಟದಿಂದ ಕೈಬಿಡುವ ಸಚಿವರ ಜೊತೆ ಅಮಿತ್ ಶಾ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದು, ರಾಜೀನಾಮೆ ನೀಡಲು ಸೂಚಿಸಿದ್ದಾರೆ ಎನ್ನಲಾಗಿದೆ.
ಹಾಗಿದ್ರೆ ಕರ್ನಾಟಕದಿಂದ ಯಾರಿಗೆಲ್ಲಾ ಸಚಿವ ಸ್ಥಾನ ಸಿಗಬಹುದು ಅನ್ನೋ ಲೆಕ್ಕಾಚಾರವನ್ನ ನೋಡೋದಾದ್ರೆ ಧಾರವಾಡ ಸಂಸದ ಪ್ರಹ್ಲಾದ್ ಜೋಷಿ,
ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಬೆಳಗಾವಿ ಸಂಸದ ಸುರೇಶ್ ಅಂಗಡಿಗೆ ಮೋದಿ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ಈ ಹಿಂದೆ ಬಳ್ಳಾರಿ ಸಂಸದ ಶ್ರೀರಾಮುಲುಗೆ ಸ್ಥಾನ ಸಿಗಬಹುದು ಎಂದು ಹೇಳಲಾಗಿತ್ತು ಆದ್ರೆ ಈಗ ಶ್ರೀರಾಮುಲು ಹೆಸರಿಲ್ಲ ಎನ್ನಲಾಗ್ತಿದೆ
Comments