ದರ್ಶನ್ ರಾಜಕೀಯಕ್ಕೆ ಎಂಟ್ರಿ: ಗೌಡರು ಹೇಳಿದ್ದು ಏನೂ?

31 Aug 2017 6:23 PM | Politics
9058 Report

ಬೆಂಗಳೂರು: ದರ್ಶನ್ ನಮ್ಮ ಪಕ್ಷಕ್ಕೆ ಬರುವುದಾದ್ದರೆ ಅವರಿಗೆ ಸ್ವಾಗತಿಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಪ್ರತಿಕ್ರಿಯಿಸಿದ್ದಾರೆ.

ದರ್ಶನ್ ರಾಜಕೀಯ ಸೇರ್ಪಡೆ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಸಿನಿಮಾದವರು ರಾಜಕೀಯಕ್ಕೆ ಬರುವುದು ಹಾಗೂ ರಾಜಕೀಯದವರು ಸಿನಿಮಾರಂಗಕ್ಕೆ ಹೋಗುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ನಮ್ಮ ಪಕ್ಷಕ್ಕೆ ಅವರು ಸೇರ್ಪಡೆಯಾದರೆ ಸ್ವಾಗತ ಎಂದು ಹೇಳಿದರು.

ದರ್ಶನ್ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುವುದು ಎಲ್ಲ ಕುಮಾರಸ್ವಾಮಿ ಅವರಿಗೆ ಬಿಟ್ಟ ವಿಚಾರ ಎಂದು ಅವರು ಪ್ರತಿಕ್ರಿಯಿಸಿದರು.

Edited By

venki swamy

Reported By

venki swamy

Comments