ಸೆ.4ಕ್ಕೆ ರಂದು ರಾಜ್ಯಕ್ಕೆ ಬಿಜೆಪಿ ನೂತನ ಚುನಾವಣಾ ಉಸ್ತುವಾರಿ ಜಾವಡೇಕರ್ ಆಗಮನ

ರಾಜ್ಯ ಬಿಜೆಪಿ ನೂತನ ಚುನಾವಣಾ ಉಸ್ತುವಾರಿ ಹಾಗೂ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಸೆ.4 ರಂದು ರಾಜ್ಯಕ್ಕೆ ಆಗಮಿಸಲಿದ್ದು,ಅಧಿಕೃತವಾಗಿ ಜವಾಬ್ದಾರಿ ನಿರ್ವಹಣೆ ಆರಂಭಿಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಂದು ಹೋದ ನಂತರ ಬಿಜೆಪಿಯಲ್ಲಿ ಸಂಚಲನ ಮೂಡಿದೆ.
ಪಕ್ಷದ ಚಟುವಟಿಕೆಯನ್ನು ಇನ್ನಷ್ಟು ಬಿರುಸುಗೊಳಿಸಲು ಕಾರ್ಯಚಟುವಟಿಕೆಗೆ ಚಾಲನೆ ಸಿಕ್ಕಿದ್ದು, ಅಮಿತ್ ಶಾ ಸೂಚನೆಯಂತೆ ಪಕ್ಷದ ರಾಜ್ಯ ವ್ಯವಹಾರಗಳ ಮೇಲೆ ನಿಗಾ ಇಡಲು ಜಾವಡೇಕರ್ ನಗರಕ್ಕೆಆಗಮಿಸುತ್ತಿದ್ದಾರೆ.ರಾಜ್ಯ ಚುನಾವಣಾ ಉಸ್ತುವಾರಿಯಾಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ಸೆ.4 ರಂದು ರಾಜ್ಯಕ್ಕೆ ಆಗಮಿಸಲಿರುವ ಜಾವ ಡೇಕರ್ ಬಿಜೆಪಿ ಮುಖಂಡರೊಂದಿಗೆ ಸುದೀರ್ಘ ಸಭೆ ನಡೆಸಲಿದ್ದಾರೆ. ರಾಜ್ಯ ಬಿಜೆಪಿ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯನ್ನೂ ನಡೆಸಲಿದ್ದು, ಚುನಾವಣಾ ಪೂರ್ವ ಸಿದ್ಧತೆಗಳ ಬಗ್ಗೆ ಸಭೆಯಲ್ಲಿ ಮಾತುಕತೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಾಜ್ಯ ಬಿಜೆಪಿ ನಾಯಕರು ನವೆಂಬರ್‍ನಲ್ಲಿ ರಾಜ್ಯದ ರಾಜಕೀಯ ಇತಿಹಾಸದಲ್ಲೇ ಅತಿ ದೊಡ್ಡ ರಥಯಾತ್ರೆ ಆಯೋ ಜಿಸಲು ನಿರ್ಧರಿಸಿದ್ದಾರೆ. ರಾಜ್ಯ ನಾಯಕರ ಈ ಪ್ರಯತ್ನಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೆಂಬಲ ಸೂಚಿಸಿದ್ದು, ಖುದ್ದು ರಥಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ಸಿಗೆ ಸಹಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.ಬರುವ ನವೆಂಬರ್‍ನಿಂದ ಜನವರಿವರೆಗೆ ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲೂ ಹಾದು ಹೋಗುವ ಬಿಜೆಪಿಯ ಕರ್ನಾಟಕ ಪರಿವರ್ತನಾ ಯಾತ್ರೆಯಲ್ಲಿ ಮೋದಿ, ಶಾ ಪಾಲ್ಗೊಳ್ಳುವುದು ಖಚಿತವಾದರೂ ಅಂತಿಮ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ ಎಂದು ಬಿಜೆಪಿ ಮೂಲಗಳು ದೃಢಪಡಿಸಿವೆ.
Comments