ಕಾಂಗ್ರೆಸ್ ಅವರನ್ನೇ ಹುಡುಕಿ ಹುಡುಕಿ ದಾಳಿ ನಡೆಸಲಾಗುತ್ತಿದೆ,ಇದರ ಹಿಂದೆ ಷಡ್ಯಂತ್ರವಿದೆ!
ಬೆಂಗಳೂರು : ಸಚಿವ ಡಿ.ಕೆ ಶಿವಕುಮಾರ್ ಆಪ್ತ ಕೆಪಿಸಿಸಿ ಕಾರ್ಯದರ್ಶಿ ವಿಜಯ್ ಮುಳಗುಂದ ನಿವಾಸದ ಮೇಲೆ ಐಟಿ ದಾಳಿ ವಿಚಾರದ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ , ಬಿಜೆಪಿ ಕಾಂಗ್ರೆಸ್ ಅವರನ್ನು ಹುಡ್ಕಿ ಹುಡ್ಕಿ ದಾಳಿ ನಡೆಸುತ್ತಿದ್ದಾರೆ ಎಂದು ಹೇಳಿದರು.

ಐಟಿ ದಾಳಿ ಮಾಡಲಿ, ಬೇಡ ಅಂದವರ್ಯಾರು, ಆದರೆ ಕಾಂಗ್ರೆಸ್ ಅವರನ್ನೇ ಹುಡುಕಿ ದಾಳಿ ನಡೆಯಲಾಗುತ್ತಿದೆ. ಚುನಾವಣೆ ಹತ್ತಿರ ಬರುತ್ತಿದೆ. ಕಾಂಗ್ರೆಸ್ ನವರ ನೈತಿಕ ಸ್ಥೈರ್ಯ ಕುಂದಿಸುವ ಷಡ್ಯಂತ್ರ ಹೂಡಿ ದಾಳಿ ಮಾಡಿಸಲಾಗುತ್ತಿದೆ ಎಂದು ಹೇಳಿದರು. ಈ ವಿಚಾರಕ್ಕಾಗಿ ಕೆಂಡಾಮಂಡಲರಾಗಿದ್ದ ಸಿಎಂ ಸಿದ್ದರಾಮಯ್ಯ ಅವರು ಎಲೆಕ್ಷನ್ ಹತ್ತಿರ ಬರುತ್ತಿದೆ ಆದಕಾರಣ ಷಡ್ಯಂತ್ರ ಮಾಡಿ ದಾಳಿ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದರು.ಡಿ.ಕೆ. ಶಿವಕುಮಾರ್ ಆಪ್ತ ವಿಜಯ್ ಮುಳುಗುಂದಾ ಮನೆ ಮೇಲೆ ಐಟಿ ದಾಳಿ ನಡೆಸಲಾಗಿದೆ. ಬೆಂಗಳೂರಿನ ರಾಜಾಜಿನಗರದ 2ನೇ ಹಂತದಲ್ಲಿರುವ ವಿಜಯ್ ಮುಳಗುಂದ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆ ಪತ್ರಗಳ ಪರಿಶೀಲನೆ ನಡೆಸಲಾಗಿತ್ತು.
Comments