ಬಿಜೆಪಿ ಪಾಳಯದಲ್ಲಿ ಕೇಳಿ ಬಂದ ಅಪಸ್ವರ
ಮುಂಬಯಿ: ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಪಾಳಯದಲ್ಲಿ ಅಪಸ್ವರ ಕೇಳ ಬರತೊಡಗಿದೆ. ಕಳೆದ ಹಲವು ತಿಂಗಳಿಂದ ರಾಣೆ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಸಕ್ರೀಯವಾಗಿ ಕೇಳಿ ಬಂದಿತ್ತು. ಆದರೂ ಈ ಬಗ್ಗೆ ಬಿಜೆಪಿಯಲ್ಲಿ ಒಮ್ಮತಾಭಿಪ್ರಾಯ ಮೂಡದ ಇರುವುದರಿಂದ ರಾಣೆ ಸೇರ್ಪಡೆ ವಿಳಂಬವಾಗುತ್ತಲೇ ಇತ್ತು.

ಬಿಜೆಪಿ ನಾಯಕರ ಅಧ್ಯಕ್ಷ ಅಮಿತ್ ಶಾ ಅವರ ಸಮಕ್ಷಮದಲ್ಲಿ ನಗರದಲ್ಲಿ ನಡೆದ ಬಿಜೆಪಿ ನಾಯಕರ ಸಭೆಯಲ್ಲಿ ರಾಣೆ ಅವರ ಸೇರ್ಪಡೆ ಬಗೆಗೆ ಸೂತ್ರವನ್ನು ಅಂತಿಮಗೊಳಿಸಲಾಗಿದೆ ಎಂದು ಪಕ್ಷದ ಬಣ ಹೇಳಿದರೆ ಇನ್ನೊಂದು ಬಣ ಯಾವುದೇ ಸೂತ್ರ ಅಂತಿಮ ಆಗಿಲ್ಲ ಎನ್ನುವ ಮೂಲಕ ನಾರಾಯಣ ರಾಣೆ ಅವರ ಸೇರ್ಪಡೆ ವಿಚಾರದಲ್ಲಿ ಪಕ್ಷದಲ್ಲಿ ಒಡಕು ಮೂಡಿರುವುದನ್ನು ಬಯಲುಗೊಳಿಸಿದೆ.
ಪಕ್ಷದ ಒಂದು ಬಣದ ಪ್ರಕಾರ ರವಿವಾರ ನಡೆದ ಸಭೆಯಲ್ಲಿ ನಾರಾಯಣ ರಾಣೆ ಅವರಿಗೆ ರಾಜ್ಯಸಭೆ ಅವರಿಗೆ ರಾಜ್ಯಸಭೆ ಸದಸ್ಯ ಸ್ಥಾನ ಕಿರಿಯ ಪುತ್ರ ನಿತೇಶ್ ರಾಣೆ ಅವರಿಗೆ ರಾಜ್ಯ ಸರ್ಕಾರದಲ್ಲಿಸಹಾಯಕ ಸಚಿವನ ಸ್ಥಾನ ಮತ್ತು ಹಿರಿಯ ಪುತ್ರ ನಿಲೇಶ್ ರಾಣೆ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ನೀಡುವ ಕೊಡುಗೆಯನ್ನು ಬಿಜೆಪಿ ರಾಣೆ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ನೀಡುವ ಕೊಡುಗೆಯನ್ನು ಬಿಜೆಪಿ ರಾಣೆ ಅವರ ಮುಂದಿಟ್ಟಿದ್ದು, ನಾರಾಯಣ ರಾಣೆ ಈ ಕುರಿತು ಸಹಮತ ವ್ಯಕ್ತಪಡಿಸಿದ್ದಾರೆ.
ಆದರೆ ಬಿಜೆಪಿಯ ಸಚಿವರೊಬ್ಬರು ಇಂತಹ ಸೂತ್ರವೊಂದು ಅಂತಿಮಗೊಂಡಿರುವುದನ್ನು ನಿರಾಕರಿಸಿದ್ದು, ನಾರಾಯಣ ರಾಣೆ ಮತ್ತವರ ಈವರ್ವರು ಪುತ್ರರಿಗೂ ಪಕ್ಷದಲ್ಲಿ ಹುದ್ದೆ ನೀಡುವ ಸಾಧ್ಯತೆಗಳಿಲ್ಲ ಎಂದು ತಿಳಿಸಿದ್ದಾರೆ.
Comments