ಸಮುದ್ರ ನೀರು ನಗರಕ್ಕೆ
ಬೆಂಗಳೂರು: ನಗರ ಪ್ರದೇಶಗಳಿಗೆ ಸಮುದ್ರದಿಂದ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಕುರಿತು ಇಂದು ರಾಜ್ಯ ಸರ್ಕಾರ ಮಹತ್ವದ ಸಭೆ ನಡೆಸಿತು. ಸಮುದ್ರ ದಡದಿಂದ ಸಿಹಿನೀರು ಸಂಗ್ರಹಿಸಿ ಮತ್ತು ಉಪ್ಪು ನೀರು ಸಂಸ್ಕರಿಸಿ ನಗರ ಪ್ರದೇಶಗಳಿಗೆ ಪೂರೈಸುವ ಮಹತ್ವದ ಯೋಜನೆ ಬಗ್ಗೆ ಪರಿಶೀಲನೆ ನಡೆಸಿದರು.
ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿ ಪ್ರೊ.ಸೀತಾರಾಮ್ ಅವರು ಈ ಕುರಿತು ಯೋಜನೆ ರೂಪಿಸಿದ್ದು, ಅದರ ಸಾಧಕ-ಬಾಧಕಗಳ ಬಗ್ಗೆ ಸಚಿವರಿಬ್ಬರು ಹಿರಿಯ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಜೆ.ಜಾರ್ಜ್, ಈ ಚರ್ಚೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಿ ಯೋಜನಾ ವೆಚ್ಚ, ಲಭ್ಯವಾಗುವ ನೀರಿನ ಗುಣಮಟ್ಟವನ್ನು ಆಧರಿಸಿ ಯೋಜನೆ ಅನುಷ್ಠಾನದ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.
Comments